ಬಿಗ್ ಬಾಸ್ ಕನ್ನಡ 12ನಲ್ಲಿ ಈ ವಾರದ ಕಿಚ್ಚ ಸುದೀಪ್ ಪಂಚಾಯಿತಿ ಭಾರೀ ಉದ್ವಿಗ್ನತೆಯ ವಾತಾವರಣದಲ್ಲಿ ಶುರುವಾಗಿದೆ. ಮನೆ ಒಳಗಿನ ಹಲವು ಜಂಟಿಗಳು ಸಪರೇಟ್ ಆಗಿರುವ ವಿಚಾರ, ಸ್ಪರ್ಧಿಗಳು ನಾಮಿನೇಟ್ ಮಾಡುವಾಗ ಕೊಟ್ಟ ಅಸಮರ್ಪಕ ಕಾರಣಗಳು ಹಾಗೂ ಮುಖ್ಯವಾಗಿ ಧ್ರುವಂತ್ ವಿಚಾರ ಈ ವಾರದ ಚರ್ಚೆಯ ಹೈಲೈಟ್ ಆಗಿದೆ.
ವೀಕ್ಷಕರೊಬ್ಬರು ಬರೆದಿದ್ದ ಪತ್ರವನ್ನು ಸುದೀಪ್ ಓದಿ ಕೇಳಿಸಿದ ಬಳಿಕ, ಧ್ರುವಂತ್ ತಮ್ಮ ಮೇಲೆ ನಿರಂತರ ಬ್ಲೇಮ್ ಹಾಕಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರಜತ್, “ಡ್ಯಾಮೇಜ್ ಮಾಡಿಕೊಳ್ಳೋದು ನೀನೇ, ಅಸಭ್ಯವಾಗಿ ಮಾತನಾಡೋದು ನಿನಗೆ ಅಭ್ಯಾಸ” ಎಂದು ಹೇಳಿದ ಮಾತು, ಸನ್ನಿವೇಶವನ್ನು ಇನ್ನಷ್ಟು ಗರಂ ಮಾಡಿತು.
ಇದನ್ನು ಕೇಳಿದ ಧ್ರುವಂತ್, ಕಿಚ್ಚ ಸುದೀಪ್ ಮುಂದೆಯೇ, “ಈಗ ನಾನು ಮಾತಾಡೋದು ನಿನಗೆ ತಡ್ಕೋ ಬೇಕಿಲ್ಲ, ನೀನೇ ತಡ್ಕೋ… ಎಷ್ಟರಲ್ಲಿ ಇರ್ಬೇಕೋ ಅಷ್ಟರಲ್ಲಿ ಇರು!” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು. ಈ ಒಂದು ವಾಕ್ಯವೇ ಮನೆಯಲ್ಲಿ ಕಿಚ್ಚು ಹೆಚ್ಚಿಸಿದಂತಾಗಿದೆ.
ಈ ವಾರ ಜಂಟಿಗಳ ವಾರ್ ಕುರಿತು ಸುದೀಪ್ ದೊಡ್ಡ ಮಟ್ಟದ ಚರ್ಚೆ ನಡೆಸಲಿದ್ದಾರೆ. ಒಟ್ಟಾಗಿದ್ದವರು ದೂರವಾದ್ರಾ? ದೂರ ಇದ್ದವರು ಒಂದಾದ್ರಾ? ಎಂಬ ಕುತೂಹಲ ಈಗ ವೀಕ್ಷಕರಲ್ಲೂ ಹೆಚ್ಚಾಗಿದೆ.
ಇದನ್ನೂ ಓದಿ : ವ್ಯಕ್ತಿಗಳ ಮನೆಯ ವಿಳಾಸವನ್ನೇ ಲೀಕ್ ಮಾಡುತ್ತಿರುವ ‘ಗ್ರಾಕ್’ ; ಎಲಾನ್ ಮಸ್ಕ್ ಕಂಪನಿಗೆ ತೀವ್ರ ಮುಜುಗರ!



















