ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋನಲ್ಲಿ ಅಂತಿಮ ವಾರಕ್ಕೆ ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ ಶೈವ, ಮ್ಯಾಟೆಂಟ್ ರಘು, ಧ್ರುವಂತ್ ಧನುಷ್, ರಕ್ಷಿತಾ ಶೆಟ್ಟಿ ಅವರು ಕಾಲಿಟ್ಟಿದ್ದರು. ಆದರೆ ಇವರಲ್ಲಿ ಒಬ್ಬರ ಆಟ ವಾರದ ಮಧ್ಯೆಯೇ ಅಂತ್ಯ ಆಗಲಿದೆ ಎಂದು ಮೊದಲೇ ಹೇಳಲಾಗಿತ್ತು. ಅದರಂತೆ 108ನೇ ದಿನದಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ಧ್ರುವಂತ್ ಅವರ ಬಿಗ್ ಬಾಸ್ ಆಟ ಅಂತ್ಯವಾಗಿದೆ. ಫಿನಾಲೆಗೆ ಹೋಗಬೇಕು, ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಧ್ರುವಂತ್ ಅವರು ಬಹುತೇಕ ಒಂಟಿಯಾಗಿ ಗುರುತಿಸಿಕೊಂಡಿದ್ದರು. ಅವರು ಯಾವುದೇ ರೀತಿಯ ಗುಂಪುಗಾರಿಕೆ ಮಾಡಿರಲಿಲ್ಲ. ಸೀಸನ್ ಮಧ್ಯದಲ್ಲಿ ಅವರು ಸ್ವಲ್ಪ ಕುಗ್ಗಿದ್ದರು. ತಾವಾಗಿಯೇ ಶೋ ತೊರೆಯುವ ನಿರ್ಧಾರ ಕೂಡ ಮಾಡಿದ್ದರು. ಆದರೆ ಸುದೀಪ್ ಅವರು ಧೈರ್ಯ ತುಂಬಿದ ಬಳಿಕ ಮರಳಿ ಆಟವನ್ನು ಚುರುಕುಗೊಳಿಸಿದ್ದರು. ಆದರೆ ಈಗ ಅವರು ಎಲಿಮಿನೇಟ್ ಆಗಿದ್ದಾರೆ.
ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲಿ, ಧನುಷ್, ರಘು ಮತ್ತು ಕಾವ್ಯಾ ಶೈವ ಅವರು ಈಗ ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ನೀಡಿದ್ದಾರೆ. ಆದರೆ ಎಲ್ಲರಿಗಿಂತ ಗಿಲ್ಲಿ ನಟ ಅವರಿಗೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ. ಹಾಗಾಗಿ ಅವರೇ ಬಿಗ್ ಬಾಸ್ ಟ್ರೋಫಿ ಗೆಲ್ಲಬಹುದು ಎಂಬ ಅಭಿಪ್ರಾಯ ಬಲವಾಗಿದೆ. ಅವರ ಪರವಾಗಿ ಭರ್ಜರಿಯಾಗಿ ಪ್ರಚಾರ ಮಾಡಲಾಗುತ್ತಿದೆ.
ಧನುಷ್ ಅವರಿಗೆ ಕಳೆದ ವಾರ ಕಿಚ್ಚ ಸುದೀಪ್ ಅವರು ಚಪ್ಪಾಳೆ ನೀಡಿದ್ದರು. ಇಡೀ ಸೀಸನ್ನ ಆಟವನ್ನು ಪರಿಗಣಿಸಿ ಅವರಿಗೆ ಕಿಚ್ಚನ ಚಪ್ಪಾಳೆ ನೀಡಲಾಗಿತ್ತು. ಆದರೆ ಅದು ವೀಕ್ಷಕರಿಗೆ ಇಷ್ಟ ಆಗಲಿಲ್ಲ. ಪೂರ್ತಿ ಸೀಸನ್ನ ಪರಿಗಣಿಸಿ ಧ್ರುವಂತ್ಗೆ ಕಿಚ್ಚನ ಚಪ್ಪಾಳೆ ನೀಡದ್ದನ್ನು ಖಂಡಿಸಿ ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಶಿವಮೊಗ್ಗ | ಇರುಮುಡಿ ಹೊತ್ತು ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ಶಿವಣ್ಣ ದಂಪತಿ



















