ಚೆನ್ನೈ ಮಾರ್ಚ್ 28, ಶುಕ್ರವಾರದ ರಾತ್ರಿ ಚೆನ್ನೈ ಸೂಪರ್ ಕಿಂಗ್ಸ್ (CSK) ಅಭಿಮಾನಿಗಳಿಗೆ ನಿರಾಸೆಯ ದಿನವಾಗಿತ್ತು. ಐಪಿಎಲ್ 2025ರ ಸದರ್ನ್ ಡರ್ಬಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಚೆನ್ನೈ ವಿರುದ್ಧ 50 ರನ್‌ಗಳ ಭಾರೀ ಜಯ ಗಳಿಸಿ ದಾಖಲೆ ಬರೆಯಿತು. . ಆದರೆ ಈ ಸೋಲಿನ ಮಧ್ಯೆ ಚೆನ್ನೈ ಅಭಿಮಾನಿಗಳಿಗೆ ಸಂತೋಷ ನೀಡಿದ ಕ್ಷಣವೂ ಇತ್ತು. ಅವರ ನೆಚ್ಚಿನ ‘ತಲ’ ಎಂಎಸ್ ಧೋನಿ ಮತ್ತೊಂದು ಮಹತ್ವದ ದಾಖಲೆ ರಚಿಸಿದರು.
ಆರ್ಸಿಬಿ ತಂಡವು 2008ರ ನಂತರ ಮೊದಲ ಬಾರಿಗೆ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್ಕೆ ವಿರುದ್ಧ ಗೆಲುವು ದಾಖಲಿಸಿತು. ಈ ಸೋಲು ಚೆಪಾಕ್‌ನಲ್ಲಿ ಸಿಎಸ್ಕೆ ಇತಿಹಾಸದಲ್ಲೇ ಅತಿ ಭಾರೀ ಸೋಲು ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳು ಧೋನಿ ಬ್ಯಾಟ್ ಹಿಡಿಯುವ ದೃಶ್ಯ ನಿರೀಕ್ಷಿಸುತ್ತಿದ್ದರು. ಅವರ ಆಸೆ ಈಡೇರಿತು. 43 ವರ್ಷದ ಧೋನಿ, ತಂಡಕ್ಕೆ ಗೆಲುವಿನ ಆಸೆ ಇರದ ಸ್ಥಿತಿಯಲ್ಲಿಯೂ 9ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರು. ಅವರು ಕೇವಲ 16 ಎಸೆತಗಳಲ್ಲಿ 2 ಸಿಕ್ಸರ್‌ಗಳು ಮತ್ತು 3 ಬೌಂಡರಿ ಬಾರಿಸಿ ಅಜೇಯ 30 ರನ್ ಗಳಿಸಿದರು.
ಈ ಬ್ಯಾಟಿಂಗ್ ದಾಳಿಯ ನಡುವೆಯೇ ಧೋನಿ ಐಪಿಎಲ್‌ನಲ್ಲಿ ಸಿಎಸ್ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದರು. ಅವರು ಇದೀಗ 236 ಪಂದ್ಯಗಳಲ್ಲಿ 204 ಇನಿಂಗ್ಸ್‌ಗಳಲ್ಲಿ 4,699 ರನ್ ಗಳಿಸಿದ್ದಾರೆ. ಇದರಿಂದ ಅವರು 176 ಪಂದ್ಯಗಳಲ್ಲಿ 4,687 ರನ್ ಗಳಿಸಿದ್ದ ಸುರೇಶ್ ರೈನಾರನ್ನು ಮೀರಿದ್ದಾರೆ.
ಐಪಿಎಲ್‌ನಲ್ಲಿ ಸಿಎಸ್ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು
- ಎಂಎಸ್ ಧೋನಿ – 4,699 ರನ್ (236 ಪಂದ್ಯಗಳು)
- ಸುರೇಶ್ ರೈನಾ – 4,687 ರನ್ (176)
- ಫಾಫ್ ಡು ಪ್ಲೆಸಿಸ್ – 2,721 ರನ್ (92)
- ರುತುರಾಜ್ ಗಾಯಕ್ವಾಡ್ – 2,433 ರನ್ (68)
- ರವೀಂದ್ರ ಜಡೇಜಾ – 1,939 ರನ್ (174)
- ಅಂಬಾಟಿ ರಾಯುಡು – 1,932 ರನ್ (90)