ಚೆನ್ನೈ: ಶುಕ್ರವಾರ ನಡೆದ ಆರ್ ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 50 ರನ್ ಗಳ ಸೋಲು ಕಂಡಿತು. ಆದರೂ ಚೆನ್ನೈ ಅಭಿಮಾನಿಗಳು ಸಂಭ್ರಮಿಸಿದರು. ಏಕೆಂದರೆ ಧೋನಿ ಕೆಲವು ಹೊತ್ತು ಕ್ರೀಸ್ ನಲ್ಲಿ ನಿಂತು ಅಭಿಮಾನಿಗಳು ರಂಜಿಸಿದರು. ಅಲ್ಲದೇ, ಈ ಪಂದ್ಯದಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ.
8ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ಧೋನಿ ಧೋನಿ 16 ಎಸೆತಗಳಲ್ಲಿ ಅಜೇಯ 30 ರನ್ ಗಳಿಸಿದರು. ಈ ಪಂದ್ಯದಲ್ಲಿ ಚೆನ್ನೈ ಪರ 30 ರನ್ ಬಾರಿಸುವ ಮೂಲಕ ಅತ್ಯಧಿಕ ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಸುರೇಶ್ ರೈನಾ(4687) ಹೆಸರಿನಲ್ಲಿತ್ತು. ಈಗ ಧೋನಿ ಚೆನ್ನೈ ಪರ 204 ಇನಿಂಗ್ಸ್ ಆಡಿ 4699* ರನ್ ಬಾರಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಕೀಪಿಂಗ್‌ನಲ್ಲಿಯೂ ಮಿಂಚಿದ ಧೋನಿ ಫಿಲ್ ಸಾಲ್ಟ್ ಅವರನ್ನು ಕೇವಲ 0.16 ಸೆಕೆಂಡ್‌ಗಳಲ್ಲಿ ಸ್ಟಂಪಿಂಗ್ ಮಾಡಿ ಎಲ್ಲರನ್ನೂ ಆಶ್ಚರ್ಯಗೊಳಿಸಿದರು.
ಚೆನ್ನೈ ಪರ ಅತ್ಯಧಿಕ ರನ್ ಬಾರಿಸಿದ ಆಟಗಾರರು
ಎಂ.ಎಸ್ ಧೋನಿ- 4699 ರನ್
ಸುರೇಶ್ ರೈನಾ- 4687 ರನ್
ಫಾಫ್ ಡು ಪ್ಲೆಸಿಸ್- 2721 ರನ್
ಋತುರಾಜ್ ಗಾಯಕ್ವಾಡ್- 2433 ರನ್
ರವೀಂದ್ರ ಜಡೇಜಾ-1939 ರನ್