ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಸಿಎಸ್ ಕೆ ತಂಡದ ಆಟಗಾರ ಎಂ.ಎಸ್. ಧೋನಿಗೆ ಬಿಸಿಸಿ ವಿಶೇಷ ಗೌರವ ಸಲ್ಲಿಸಿದೆ.
ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯೆ ನಡೆದ ಪಂದ್ಯಕ್ಕೂ ಮೊದಲು, ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಸಿಎಸ್ ಕೆ ತಂಡವನ್ನು ಐದು ಬಾರಿ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದ ಧೋನಿಗೆ ಬಿಸಿಸಿಐ ವಿಶೇಷ ಗೌರವ ಸಲ್ಲಿಸಿದೆ. ಸದ್ಯ ವಿಶೇಷ ಗೌರವ ಸಲ್ಲಿಸಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು 6 ರನ್ ಗಳಿಂದ ಆರ್ ಆರ್ ಗೆ ಶರಣಾಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಆರ್ ತಂಡ 182 ರನ್ ಗಳಿಸಿತ್ತು. ಆದರೆ, ಚೆನ್ನೈ ತಂಡ 176 ರನ್ ಗಳಿಸಿ ಸೋಲು ಕಂಡಿದೆ.
ಧೋನಿ 2008 ರಿಂದ ಐಪಿಎಲ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ ಬಿಸಿಸಿಐ ಧೋನಿಗೆ ಜೈಪುರದಲ್ಲಿ ಸನ್ಮಾನ ಮಾಡಿದೆ. ಬಿಸಿಸಿಐ ಕಾರ್ಯದರ್ಶಿ ಶ್ರೀ ದೇವಜಿತ್ ಸೈಕಿಯಾ ಅವರು ಧೋನಿಗೆ ವಿಶೇಷ ಪುರಸ್ಕಾರ ನೀಡಿ ಗೌರವ ಸಲ್ಲಿಸಿದರು.