ಬೆಂಗಳೂರು: ಗದಗದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ (DHFWS Gadag Recruitment 2025) ಖಾಲಿ ಇರುವ ನಾಲ್ಕು ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ವೈದ್ಯಾಧಿಕಾರಿ, ಭೌತಚಿಕಿತ್ಸಕ, ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಸ್ಪೀಚ್ ಥೆರಪಿಸ್ಟ್ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಸೆಪ್ಟೆಂಬರ್ 1ರಂದು ನೇರ ಸಂದರ್ಶನ ನಡೆಯಲಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗದಗ
ಹುದ್ದೆ ಹೆಸರು: ವೈದ್ಯಾಧಿಕಾರಿ, ಭೌತಚಿಕಿತ್ಸಕ, ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ಸ್ಪೀಚ್ ಥೆರಪಿಸ್ಟ್
ಒಟ್ಟು ಹುದ್ದೆ: 04
ಉದ್ಯೋಗ ಸ್ಥಳ: ಗದಗ, ಕರ್ನಾಟಕ
ನೇಮಕಾತಿ ವಿಧಾನ: ಸಂದರ್ಶನ
ಆಯಾ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ಎಂಬಿಬಿಎಸ್, ಡಿಎಂ, ಎಂಡಿ, ಡಿಎಸ್ ಬಿ, ಬಿಪಿಟಿ, ಎಂ.ಫಿಲ್, ಬಿಎಎಸ್ಎಲ್ ಪಿ ಕೋರ್ಸ್ ಗಳನ್ನು ಮುಗಿಸಿದವರು ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. 45ರಿಂದ 60 ವರ್ಷದೊಳಗಿನವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳಿಗೆ ಅನುಗುಣವಾಗಿ 60 ಸಾವಿರ ರೂಪಾಯಿಯಿಂದ 1.5 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ.
ಸಂದರ್ಶನದ ವಿವರ
ಸ್ಥಳ: ಜಿಲ್ಲಾಡಳಿತ ಕಟ್ಟಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ, ಕೊಠಡಿ ಸಂಖ್ಯೆ 101, ಗದಗ.
ದಿನಾಂಕ: ಸೆಪ್ಟೆಂಬರ್ 01
ಸಮಯ: ಬೆಳಗ್ಗೆ 10.30
ಸಂದರ್ಶನಕ್ಕೆ ಹಾಜರಾಗುವವರು ವಿದ್ಯಾರ್ಹತೆ, ಗುರುತಿನ ಚೀಟಿ ಸೇರಿ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಬರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


















