ಧಾರವಾಡ : ಧಾರವಾಡ ಜಿಲ್ಲೆಯಲ್ಲಿ ಒಂದೇ ದಿನ ಇಬ್ಬರು ಪೊಲೀಸರು ಮೃತ ಪಟ್ಟಿದ್ದಾರೆ. ಓರ್ವ ಎಎಸ್‍ಐ ಹೃದಯಾಘಾತದಿಂದ ಹಾಗೂ ಮತ್ತೋರ್ವ ಹೆಡ್ ಕಾನ್ಸಟೇಬಲ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸ್ ಠಾಣೆಯ ಎಎಸ್‍ಐ ಚಂದ್ರಕಾಂತ ಹುಟಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪೊಲೀಸ್ ಠಾಣೆಯಿಂದ ಮನೆಗೆ ವಿಶ್ರಾಂತಿಗೆ ತೆರಳಿದ್ದ ವೇಳೆ ಅವರಿಗೆ ಹೃದಯಾಘಾತವಾಗಿದೆ. ಸ್ಥಳದಲ್ಲೇ ಕೊನೆವುಸಿರೆಳೆದಿದ್ದಾರೆ.
ಮತ್ತೊಂದಡೆ ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸಟೆಬಲ್ ಎನ್.ಬಿ ಭಜಂತ್ರಿ ಬಹು ಅಂಗಾಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತಿದ್ದರು. ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
ಇಬ್ಬರು ಪೊಲೀಸರ ಸಾವಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳು ಕಂಬನಿ ಹರಿಸಿದ್ದಾರೆ.
ಇದನ್ನೂ ಓದಿ :ಕೋಟಿ ಕೋಟಿ ಕೊಟ್ರೂ ಅಮೆರಿಕಕ್ಕೆ ಕೆಲಸಗಾರರೇ ಬರ್ತಿಲ್ಲ – ಇದಕ್ಕೆ ಟ್ರಂಪ್ ನೀತಿನೇ ಕಾರಣನಾ ?



















