ಧಾರವಾಡ : ಉದ್ದು ಖರೀದಿ ಕೇಂದ್ರ ವಿರುದ್ಧ ದಿಢೀರ್ ಪ್ರತಿಭಟನೆಗೆ ಇಳಿದ ಅನ್ನದಾತರು ಖರೀದಿ ಕೇಂದ್ರ ದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರಾಲಿ ಮಾಡಿದ್ದಾರೆ.

ಧಾರವಾಡ ಹಳೆ ಎಪಿಎಂಸಿಯಲ್ಲಿರುವ ಕೇಂದ್ರದಲ್ಲಿ ಉದ್ದಿನ ಚೀಲದೊಂದಿಗೆ ಟ್ರಾಕ್ಟರ್ ಮೂಲಕ ಆಗಮಿಸಿದ್ದಾರೆ. ಕೆಲ ಸಮಯ ನಗರದ ಜ್ಯಬ್ಲಿ ಸರ್ಕರ್ ಬಂದ್ ಮಾಡಿ ಎಂದು ರೈತರು ಆಕ್ರೋಶಿಸಿದ್ದಾರೆ.
ರೈತರಿಂದ ನೇರವಾಗಿ ಬೆಂಬಲ ಬೆಲೆ ನೀಡಿ ಖರೀದಿ ಮಾಡುವ ಕೇಂದ್ರವು ಸರಿಯಾಗಿ ಉದ್ದು ಕಾಳು ಖರೀದಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರವು ಮೋಚ್ಸರ್ ಬರುತ್ತಿಲ್ಲ ಎಂದು ನೆಪ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಆದರೆ ರೈತರು ಪಟ್ಟು ಬಿಡದೇ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸುತ್ತಿದ್ದಾರೆ.
ಇದನ್ನೂ ಓದಿ : ಕುಣಿಗಲ್ನಲ್ಲಿ ಪುಡಿರೌಡಿಗಳ ಅಟ್ಟಹಾಸ | ಬಿಯರ್ ಹಣ ಕೇಳಿದ್ದಕ್ಕೆ ಲಾಂಗ್ ಬೀಸಿ ಬೆದರಿಕೆ



















