ಬೆಂಗಳೂರು : ಇಂದಿನ ವ್ಯವಸ್ಥೆಯಲ್ಲಿ ಅವರರವ ಅಭಿಪ್ರಾಯ ವ್ಯಕ್ತಪಡಿಸುವುದಕ್ಕೆ ಸ್ವತಂತ್ರರಿದ್ದಾರೆ. ಅವರ(ಬಿಜೆಪಿ) ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡುವ ಅವಶ್ಯಕತೆಯಿಲ್ಲ. ಧರ್ಮಸ್ಥಳವನ್ನು ಆರ್.ಎಸ್.ಎಸ್ ನಾಯಕರು ಅಥವಾ ಇನ್ಯಾರೋ ಹೊರಗಿನವರು ಹೋಗಿ ರಕ್ಷಣೆ ಮಾಡಬೇಕಂತಿಲ್ಲ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಕಿಮ್ಮನೆ, ಧರ್ಮಸ್ಥಳದ ವಿಚಾರವಾಗಿ ಯಾಕೆ ಹೋರಾಟ ಮಾಡುತ್ತಿದ್ದಾರೆನ್ನುವುದೇ ತಿಳಿಯುತ್ತಿಲ್ಲ. ಇದು ನಂಬಿಕೆ ಮತ್ತು ಅವರವರ ಭಾವನೆಗಳಿಗೆ ಸಂಭಂದಿಸಿದ ವಿಚಾರ. ಧರ್ಮಾಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಧರ್ಮಸ್ಥಳದವರೇ ಎಸ್.ಐ.ಟಿ ತನಿಖೆಯನ್ನು ಸ್ವಾಗತಿಸಿದ್ದಾರೆ. ನ್ಯಾಯಾಲಯದ ಮೂಲಕ ಸತ್ಯಾಂಶ ಹೊರಬರಲಿ. ಅಲ್ಲಿಯವರಗೆ ಕಾಯಬೇಕಲ್ಲವೇ ಎಂದು ಹೇಳಿದ್ಧಾರೆ.
ನ್ಯಾಯಾಲಯದ ತೀರ್ಪಿಗೆ ಬಾಬ್ರಿ ಮಸೀದಿ ವಿಚಾರವಾಗಿ ಒಪ್ಪಿಲ್ಲವೇ ? ಬಿಜೆಪಿಯವರು ಜಾತಿ, ಧರ್ಮದ ವಿಚಾರಚಾಗಿಯೇ ರಾಜಕೀಯ ಮಾಡುತ್ತಾ ಬಂದಿದೆ. ಆರ್.ಎಸ್.ಎಸ್ ಹುಟ್ಟುವ ಮೊದಲು ಧರ್ಮಸ್ಥಳ ಇರಲಿಲ್ಲವೇ ? ಎಂದು ಪ್ರಶ್ನಿಸಿದ್ದಲ್ಲದೇ, ಧರ್ಮದ ಇವರಿಂದ ಉಳಿಯುತ್ತಿಲ್ಲ. ತನಿಖೆ ಮಾಡಿದರೂ, ತನಿಖೆ ಮಾಡದೇ ಇದ್ದರೂ ಬಿಜೆಪಿ ನಾಯಕರು ವಿರೋಧಿಸುತ್ತಾರೆ. ಬಿಜೆಪಿ ಕೇವಲ ಧರ್ಮ ರಾಜಕೀಯ ಮಾಡುಕೊಂಡು ಬಂದಿದೆ. ಇವೆಲ್ಲಾ ಚುನಾವಣೆ ಹಾಗೂ ಮತಕ್ಕಾಗಿ ಎಂದು ಅವರು ಟೀಕಿಸಿದ್ದಾರೆ.


















