ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಇಂದು ಸದನದಲ್ಲಿ ಆಡಳಿತ ಕಾಂಗ್ರೆಸ್ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಚ್ಚೆತ್ತುಕೊಂಡಂತಿದೆ. ಎಸ್.ಐ.ಟಿ ತನಿಖೆ ಬಗ್ಗೆ ವಿಪಕ್ಷಗಳು ಪ್ರಶ್ನಿಸುತ್ತಿರುವುದರ ನಡುವೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮೂವರು ವಿಧಾನಸೌಧದಲ್ಲಿರುವ ಸಿಎಂ ಕೊಠಡಿಯಲ್ಲಿ ಚರ್ಚೆ ಮಾಡುತ್ತಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಸದನದಲ್ಲಿ ಎಸ್.ಐ.ಟಿ ತನಿಖೆಯ ಹಂತದ ಬಗ್ಗೆ ವಿಪಕ್ಷಗಳು ಸರ್ಕಾರದಿಂದ ಉತ್ತರ ಬಯಸಿದೆ. ಉತ್ತರ ನೀಡುವುದಕ್ಕೂ ಮುನ್ನ ಮೂವರು ಚರ್ಚೆ ನಡೆಸುತ್ತಿದ್ದಾರೆ.
ತನಿಖಾ ಪ್ರಗತಿಯ ಬಗ್ಗೆ ಸದನಕ್ಕೆ ಮಾಹಿತಿ ನೀಡಲು ಸರ್ಕಾರ ತೀರ್ಮಾನ ಮಾಡಿದ್ದು, ಇದುವರೆಗೆ ಎಸ್.ಐ.ಟಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಸಿದ ತನಿಖೆಯ ವಿವರವನ್ನು ನೀಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.


















