ಬೆಂಗಳೂರು: ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಮುಸುಕುದಾರಿ ಸಿ.ಎನ್ ಚಿನ್ನಯ್ಯನನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ದರು. ನಾನು ಪ್ರಸ್ತಾಪ ಮಾಡಿದ ಮೇಲೆ ಅವರು ಮಾತನಾಡುತ್ತಿದ್ದಾರೆ. ನನಗೆ ಮೊದಲಿನಿಂದ ನಂಬಿಕೆ ಇತ್ತು. ತನಿಖೆಗೆ ಧರ್ಮಾಧಿಕಾರಿಗಳು ಕೂಡ ಸ್ವಾಗತ ಮಾಡಿದ್ದಾರೆ. ಕುಟುಂಬದವರು ಸಿಎಂ ಭೇಟಿ ಮಾಡಿ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ ಎಂದು ಹೇಳಿದ್ದರು.
ಬಾಲಕೃಷ್ಣ ಅವರು ಅಸೆಂಬ್ಲಿಯಲ್ಲಿ ಪ್ರಸ್ತಾವನೆ ಮಾಡಿದರು. ನಾನು ಅವತ್ತು ಮಾತಾಡಿರಲಿಲ್ಲ. ಯಾರು ತಪ್ಲು ಮಾಡಿದರು ಅವರ ಮೇಲೆ ಕ್ರಮ ಆಗುತ್ತೆ. ಸಿಎಂ , ಗೃಹ ಸಚಿವರು ಕೂಡ ಹೇಳಿದ್ದಾರೆ. ನಾನು ಯಾರ ಪರವೂ ಇಲ್ಲ, ಧರ್ಮದಲ್ಲಿ ರಾಜಕಾರಣ ಮಾಡಬಾರದು. ತನಿಖೆ ಆಗುತ್ತಿದೆ. ಕಾದು ನೋಡಬೇಕಿದೆ. ನಾವು ನ್ಯಾಯದ ಪರ, ಧರ್ಮದ ಪರ ಎಂದು ಬಿಜೆಪಿ ನಾಯಕರಿಗೆ ಡಿಕೆಶಿ ಖಡಕ್ ಉತ್ತರ ನೀಡಿದ್ದಾರೆ.