ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ನೀಡಿದ ದೂರಿನನ್ವಯ ಕಲ್ಲೇರಿಯ ರಹಸ್ಯ ಭೇದಿಸಲು ಎಸ್ ಐ ಟಿ ತಂಡ ತೆರಳಿತ್ತು.
2010 ರಲ್ಲಿ ಶಾಲಾ ಬಾಲಕಿಯ ಮೃತ ದೇಹ ರಹಸ್ಯವಾಗಿ ದಫನ್ ಮಾಡಿರುವುದರ ಬಗ್ಗೆ ಸಾಕ್ಷಿ ದೂರುದಾರ ಮಾಹಿತಿ ನೀಡಿದ್ದು, ಕಲ್ಲೇರಿ ಸಮೀಪ ಕಾಡಿನಲ್ಲಿ ಶವ ಹೂಳಲಾಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದ. ಆದ್ದರಿಂದ ಅನಾಮಿಕ ದೂರುದಾರ ಕಲ್ಲೇರಿ ಸಮೀಪ ತೋರಿಸಿದ್ದ ಜಾಗದಲ್ಲಿ ಎಸ್ ಐ ಟಿ ತಂಡ ಉತ್ಖನನ ಮಾಡಿದೆ. ಆದರೆ, ಯಾವುದೇ ಕಳೇಬರ ಪತ್ತೆಯಾಗಿಲ್ಲ.
ದೂರುದಾರ ತೋರಿಸಿದ ಜಾಗವನ್ನು ನಂಬರ್ 15 ಎಂದು ಗುರುತು ಮಾಡಲಾಗಿದ್ದು, ಸ್ಥಳ ಪರಿಶೋಧನೆ ಸಂದರ್ಭದಲ್ಲಿ ಯಾವುದೇ ಅಸ್ಥಿಪಂಜರದ ಕುರುಹ ಪತ್ತೆಯಾಗಿಲ್ಲ. ಬಳಿಕ ದೂರುದಾರ ʼ15ʼ ಅಕ್ಕ ಪಕ್ಕ ಮತ್ತೆ ಮೂರು ಜಾಗ ಗುರುತಿಸಿದ್ದಾನೆ.
ಅಧಿಕಾರಿಗಳು ಆ ಪೈಕಿ ಒಂದು ಸ್ಥಳಕ್ಕೆ ʼಸ್ಪಾಟ್ ನಂಬರ್ 15 (a)ʼ ಎಂದು ಗುರುತು ಮಾಡಿದ್ದು, ಉಳಿದ 2 ಜಾಗಕ್ಕೆ ಗುರುತು ನೀಡಿಲ್ಲ.
ದೂರುದಾರ ತೋರಿಸಿದ ಎಲ್ಲಾ ಸ್ಥಳಗಳನ್ನು ಉತ್ಖನನ ನಡೆಸಿದರೂ ಯಾವುದೆ ಕುರುಹು ಪತ್ತಯಾಗಿಲ್ಲ.