ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಎಸ್ಐಟಿ ತನಿಖೆ ನಡೆಸಲ್ಲ ಎಂದು ಸಿಎಂ ಹಿಂದೆ ಹೇಳಿಕೆ ನೀಡಿದ್ದರು. ಅದಾದ ಬಳಿಕ ಎಸ್ಐಟಿ ತನಿಖೆ ಮಾಡಿದ್ದರು. ರಾತ್ರೋರಾತ್ರಿ ಬದಲಾವಣೆ ಆಗುವುದಕ್ಕೆ ಕಾರಣವೇನು ಎಂದು ಬಿ.ವೈ. ವಿಜಯೇಂದ್ರ ಪ್ರಶ್ನೆ ಮಾಡಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ವಿಜಯೇಂದ್ರ, ಎಸ್.ಐ.ಟಿ ರಚನೆಯಾಗಬೇಕು ಯಾವ ಸಂಘಟನೆ ಒತ್ತಡ ಹಾಕಿದ್ದರು ಎನ್ನುವುದನ್ನು ಸಿಎಂ ಸಿದ್ದರಾಮಯ್ಯ ಅವರೇ ಹೇಳಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ, ಎಸ್ ಐಟಿ ತನಿಖೆಗೆ ಕಾರಣವಾದ ಮುಸುಕುದಾರಿಯ ಹಿನ್ನಲೆಯ ಬಗ್ಗೆ ತನಿಖೆಯಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಲವು ವ್ಯಕ್ತಿಗಳು ಸಂಘಟನೆ ಮಾಡಿಕೊಂಡು ಧರ್ಮಸ್ಥಳದ ವಿರೋಧವಾಗಿ ಚರ್ಚಿಸುತ್ತಿದ್ದಾರೆ. ಬಿ.ಎಲ್ ಸಂತೋಷ್ ಅವರ ಬಗ್ಗೆ ಮಾತನಾಡಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಅವಮಾನ ಮಾಡಿ ವ್ಯಕ್ತಿಗಳ ತೇಜೋವಧೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮುಸುಕುಧಾರಿ ಹೇಳಿಕೆ ಎಷ್ಟು ಮುಖ್ಯನೋ, ಡಿಕೆಶಿ ಅವರ ಷಡ್ಯಂತ್ರದ ಹೇಳಿಕೆ ಕೂಡ ಮುಖ್ಯ. ಮಂಜುನಾಥ ಕ್ಷೇತ್ರದ ಪಾವಿತ್ರತೆ ಉಳಿಯಬೇಕು ಎಂದು ಹೇಳಿದ್ದಾರೆ.