ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲದಡಿ ಮೃತದೇಹದ ಅವಶೇಷಗಳ ಪತ್ತೆ ಹಚ್ಚಲು ತಂತ್ರಜ್ಞಾನ ಬಳಸಲು ಮತ್ತು ಅಲ್ಲಿ ಅವಶೇಷಗಳು ಇರುವುದು ಖಚಿತವಾದರೆ ಮಾತ್ರ ಅಗೆಯುವ ಕಾರ್ಯ ಮುಂದುವರಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ಚಿಂತನೆ ನಡೆಸಿದೆ.
ಎಸ್‌ಐಟಿ ಅಧಿಕಾರಿಗಳು ನೇತ್ರಾವತಿ ಸ್ನಾನಘಟ್ಟದ ಸಮೀಪ ಹೆದ್ದಾರಿ ಪಕ್ಕದ ಕಾಡಿನೊಳಗೆ 8ನೇ ದಿನವೂ (ಬುಧವಾರ) ಶೋಧ ಕಾರ್ಯಾಚರಣರೆ ಮಾಡಿದ್ದರು.
ಇಂದೂ ಕಾರ್ಯಾಚರಣೆ ಮುಂದುವರಿಸಲಿದ್ದಾರೆ. ಆದರೆ, ಇಂದೇ ಮೃತದೇಹಗಳ ಅವಶೇಷಗಳ ಪತ್ತೆಗೆ ತಂತ್ರಜ್ಞಾನವನ್ನು ಬಳಸಲಿದ್ದಾರೆಯೇ ಎನ್ನುವುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.