ಧಾರವಾಡ : ಧರ್ಮಸ್ಥಳ ಪ್ರಕರಣದಲ್ಲಿ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಹೇಳುತ್ತಿದ್ದಾರೆ. ಏನೇ ಆದರೂ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಬಿಜೆಪಿಯವರು ಹೇಳುತ್ತಾರೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಲಾಡ್, ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ. ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ, ತನಿಖೆಗೆ ಎಸ್.ಐ,ಟಿ ರಚನೆಯಾಗಬೇಕು ಎಂಬ ಒತ್ತಡ ಕೇಳಿಬಂದ ಹಿನ್ನೆಲೆಯಲ್ಲಿ ಎಸ್.ಐ.ಟಿ ರಚನೆ ಮಾಡಿದ್ದೇವೆ ಎಂದು ಹೇಳಿದ್ಧಾರೆ.
“ಸಂಚು ಇದೆ ಎನ್ನುವುದಕ್ಕೇ ಎಸ್.ಐ. ಟಿ ರಚನೆ ಮಾಡಿದ್ದೇವೆ” ಎಂದು ಬಿಜೆಪಿ ನಾಯಕರ ಆರೋಪಕ್ಕೆ ಮಾರ್ಮಿಕವಾಗಿ ತಿರುಗೇಟು ನೀಡಿದ್ದಲ್ಲದೇ, ತನಿಖೆಯಿಂದ ವಾಸ್ತವಾಂಶ ಹೊರಬರಲಿ. ಯಾರೋ ಒಬ್ಬ ಬಂದು ದೂರು ಹೇಳಿದ. ಕಾನೂನಿನ ಮುಖಾಂತರ ತನಿಖೆ ನಡೆಯುತ್ತಿದೆ. ಸರ್ಕಾರ ಕೂಡ ಉತ್ತರ ನೀಡಲಿದೆ. ಯಾವ ಸಂದರ್ಭದಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ದೂರುದಾರ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಹೇಳುತ್ತಾನೆ. ಆತನ ಹೇಳಿಕೆಯ ಮೇಲೆ ತನಿಖೆಯಾಗುತ್ತದೆ. ಎಸ್.ಐ.ಟಿ ತನಿಖೆಯ ನಂತರ ವರದಿ ಬರಲಿದೆ. ಸತ್ಯಾಂಶ ಹೊರಬರಲಿ ಎಂದು ಲಾಡ್ ಹೇಳಿದ್ದಾರೆ.