ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣದ ತನಿಖೆ ಸಂಬಂಧ ವಿಚಾರಣೆಯಲ್ಲಿದ್ದ ಗಿರೀಶ್ ಮಟ್ಟಣ್ಣನವರ್, ಜಯಂತ್. ಟಿ., ವಿಠಲ ಗೌಡ, ಯೂಟ್ಯೂಬರ್ ಅಭಿಷೇಕ್ ಅವರನ್ನು ನಿನ್ನೆ(ಶುಕ್ರವಾರ) ತಡರಾತ್ರಿಯವರೆಗೆ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಖುದ್ದಾಗಿ ತೀವ್ರ ವಿಚಾರಣೆ ಮಾಡಿದ್ದಾರೆ. ಇಂದು ಕೂಡ ಎಸ್.ಐ.ಟಿ ಅಧಿಕಾರಿಗಳು ಈ ನಾಲ್ವರಿಗೆ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಲಾಗಿತ್ತು, ಈ ಸಂಬಂಧಿಸಿದಂತೆ ಇದೀಗ ಇಂದು(ಶನಿವಾರ,ಸೆ.06) ಬೆಳಗ್ಗೆ 10:30ರ ಸುಮಾರಿಗೆ ವಿಚಾರಣೆಗೆ ಮತ್ತೆ ಹಾಜರಾಗಿದ್ದಾರೆ. ಎಸ್.ಐ.ಟಿ ಅಧಿಕಾರಿಗಳು ತೀವ್ರ ವಿಚಾರಣೆ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.
ನಿನ್ನೆ(ಶುಕ್ರವಾರ) ತಡರಾತ್ರಿವರೆಗೆ ಎಸ್.ಐ.ಟಿ ಮುಖ್ಯಸ್ಥ ಡಾ. ಪ್ರಣವ್ ಮೊಹಂತಿ ಅವರು ನಾಲ್ವರನ್ನು ವಿಚಾರಣೆ ನಡೆಸಿ ಬೆಳ್ತಂಗಡಿಯಿಂದ ತೆರಳಿದ್ದಾರೆ.
ಇನ್ನು, ಸಾಕ್ಷಿ ದೂರುದಾರ ಆರೋಪಿ ಚಿನ್ನಯ್ಯನ 15 ದಿನಗಳ ಎಸ್.ಐ.ಟಿ ಕಸ್ಟಡಿ ಮುಕ್ತಾಯ ಆಗಿರುವ ಹಿನ್ನೆಲೆ ಇಂದು (ಶನಿವಾರ, ಸೆ.06) ನ್ಯಾಯಾಲಯಕ್ಕೆ ಎಸ್.ಐ.ಟಿ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ.