ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಮೂಲದ ಯೂಟ್ಯೂಬರ್ ಮನಾಫ್ ಗೆ ಎಸ್ಐಟಿ ನೊಟೀಸ್ ನೀಡಿದೆ.
ಉತ್ತರ ಕನ್ನಡ ಶಿರೂರು ಗುಡ್ಡ ಕುಸಿತ ದುರಂತದ ಲಾರಿ ಮಾಲೀಕ ಮನಾಫ್ ಎಂಬಾತ ತನ್ನ ಯೂಟ್ಯೂಬ್ ನಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ಪ್ರಸಾರ ಮಾಡಿದ್ದು, ಪ್ರಕರಣ ತೀವ್ರತೆ ಪಡೆದುಕೊಳ್ಳುತ್ತಿರುವ ಹಿನ್ನೆಲಯಲ್ಲಿ ಎಸ್.ಐ.ಟಿ ಈಗ ಆತನಿಗೆ ನೋಟೀಸ್ ನೀಡಿ ವಿಚಾರಣೆಗೆ ಬುಲಾವ್ ನೀಡಿರುವ ಮಾಹಿತಿ ಲಭ್ಯವಾಗಿದೆ.
ಜಯಂತ್.ಟಿ ಮೂಲಕ ಮಾಹಿತಿ ಪಡೆದುಕೊಂಡು, ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿ ಹೂಳಲಾಗಿದೆ ಎಂದು ಮನಾಫ್ ಕೇರಳದಲ್ಲಿ ತನ್ನ ಯೂಟ್ಯೂಬ್ ಖಾತೆಯ ಮೂಲಕ ಪ್ರಸಾರ ಮಾಡಿದ್ದಾನೆ. ಈ ಸಂಬಂಧ ಎಸ್ ಐ ಟಿ ನೋಟೀಸ್ ನೀಡಿದೆ.