ಬೆಳ್ತಂಗಡಿ : ಧರ್ಮಸ್ಥಳ ನೇತ್ರಾವತಿ ನದಿ ಸ್ನಾನಘಟ್ಟದ ಸಮೀಪದಲ್ಲಿ ಈಗಾಗಲೇ ಸಾಕ್ಷಿ ದೂರುದಾರ ಗುರುತಿಸಿರುವ 13ನೇ ಸ್ಥಳದ ಶೋಧ ಕಾರ್ಯಕ್ಕೆ ಇಂದು(ಮಂಗಳವಾರ,ಆ.12) ಜಿ.ಪಿ.ಆರ್ ಯಂತ್ರ ಈಗಾಗಲೇ ಬಂದಿದ್ದು, ಇದೀಗ ಎಸ್.ಐ.ಟಿ ಮುಖ್ಯಸ್ಥ ಡಾ. ಪ್ರಣವ್ ಮೊಹಂತಿ, ಎ.ಸಿ ಸ್ಟೆಲ್ಲಾ ವರ್ಗೀಸ್ ಆಗಮಿಸಿದ್ದಾರೆ.
ಸಾಕ್ಷಿ ದೂರುದಾರ ಮೃತದೇಹವನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ ಪ್ರಕರಣದ ತನಿಖೆಯಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ನಡೆದಿದ್ದು, ಆ.11ರಂದು ಸಂಜೆ 2.44ರ ಸುಮಾರಿಗೆ ಜಿ.ಪಿ.ಆರ್ ಯಂತ್ರವನ್ನು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದರು.
ಇಂದು(ಮಂಗಳವಾರ) ಸಾಕ್ಷಿ ದೂರುದಾರನೊಂದಿಗೆ ಎಸ್.ಐ.ಟಿ ಅಧಿಕಾರಿಗಳು 12.45ಕ್ಕೆ ಆಗಮಿಸಿದ್ದಾರೆ. 13ನೇ ಸ್ಥಳದಲ್ಲಿ ಸುಮಾರು 10 ಸೆಂಟ್ಸ್ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗಿತ್ತು. ಈಗ ಡಾ. ಪ್ರಣವ್ ಮೊಹಂತಿ. ಎ.ಸಿ ಸ್ಟೆಲ್ಲಾ ವರ್ಗೀಸ್, ತನಿಖಾಧಿಕಾರಿ ಜಿತೇಂದ್ರ ದಯಾಮ ಅವರು ಸಾಕ್ಷಿ ದೂರುದಾರನೊಂದಿಗೆ ಜಿಪಿಆರ್ ಮೂಲಕ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸ್ಥಳ ಶೋಧಕ್ಕೆ ಕಾರ್ಮಿಕರನ್ನು ನಿಯೋಜಿಸಲಾಗಿದೆ.