ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸುಕುದಾರಿ ಸಾಕ್ಷಿ ದೂರುದಾರನಾಗಿದ್ದ ಚಿನ್ನಯ್ಯ ತೆಗೆದುಕೊಂಡು ಬಂದಿದ್ದ ಬುರುಡೆಯನ್ನು ಕಾಡಿನಿಂದಲೇ ತಂದಿರುವ ಮೂಲ ವಿಡಿಯೋಯೊಂದು ಈಗ ಲಭ್ಯವಾಗಿದೆ.
ಕೇರಳದ ಯೂಟ್ಯೂಬರ್ ಮನಾಫ್ ಯುಟ್ಯೂಬ್ ನಲ್ಲಿ ಜುಲೈ 11 ರಂದು ಈ ವೀಡಿಯೋ ಅಪ್ಲೋಡ್ ಆಗಿದೆ.
ಬಂಗ್ಲೆಗುಡ್ಡೆಯಿಂದಲೇ ಬುರುಡೆಯನ್ನು ತಂದಿರುವುದಾಗಿ ಜಯಂತ್ ಹೇಳಿದ್ದಾರೆ.
ಭೂಮಿಯ ಮೇಲ್ಬಾಗದಲ್ಲಿ ಸೀರೆ ಬಿಗಿದ ಮರದ ಪಕ್ಕದಲ್ಲಿ ಪತ್ತೆಯಾಗಿರುವ ಬುರುಡೆಯನ್ನು ಕತ್ತಿ ಮೂಲಕ ಎತ್ತಿ ತಂದಿರುವಂತಹ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಕಾಡುಪ್ರದೇಶದಲ್ಲಿ ದೃಶಯ ಸೆರೆ ಹಿಡಿರುವುದರಿಂದ ಧರ್ಮಸ್ಥಳ ಭಾಗದಿಂದಲೇ ಬುರುಡೆ ಎತ್ತಿಕೊಂಡು ಬಂದಿರುವ ಅನುಮಾನ ವ್ಯಕ್ತವಾಗಿದೆ.



















