ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ದಿನದಿನಕ್ಕೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತೀವ್ರ ತನಿಖೆ ಮಾಡುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ, ಬೆಳ್ತಂಗಡಿ, ಉಜಿರೆ, ಬೆಂಗಳೂರಿನ ಕೆಲವಡೆ ಎಸ್.ಐ.ಟಿ ತೀವ್ರ ತನಿಖೆ ನಡೆಸಿದೆ. ಎಸ್.ಐ.ಟಿ ಕಚೇರಿಗೆ ಬಂದು ದೂರು ಸಲ್ಲಿಸಿದ ದೂರುದಾರರನ್ನೂ ಕೂಡ ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ.
ನಿನ್ನೆ(ಶುಕ್ರವಾರ) ತಡರಾತ್ರಿಯವರೆಗೆ ಗಿರೀಶ್ ಮಟ್ಟಣ್ಣನವರ್, ಜಯಂತ್. ಟಿ , ಅಭಿಷೇಕ್, ವಿಠಲ ಗೌಡ ಅವರನ್ನು ತೀವ್ರ ವಿಚಾರಣೆ ನಡೆಸಿದೆ. ವಿಚಾರಣೆಯ ಬಳಿಕ ಎಸ್.ಐ.ಟಿ ಕಚೇರಿಯಲ್ಲೇ ಅವರಿಗೆ ಉಳಿಯುವುದಕ್ಕೂ ಕೂಡ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇಂದು(ಶನಿವಾರ) ಕೂಡ ಎಸ್.ಐ.ಟಿ ಈ ನಾಲ್ವರ ವಿಚಾರಣೆಯನ್ನು ಮುಂದುವರಿಸಲಿದೆ. ನಿನ್ನೆ ಸ್ವತಃ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರೇ ಈ ನಾಲ್ವರನ್ನು ವಿಚಾರಣೆ ನಡೆಸಿದ್ದು, ಪ್ರಕರಣದ ಬಗ್ಗೆ ಬಹು ಆಯಾಮಗಳಲ್ಲಿ ಮೊಹಂತಿ ಪ್ರಶ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು, ಸಾಕ್ಷಿ ದೂರುದಾರ ಚಿನ್ನಯ್ಯ ತಂದ ಬುರುಡೆ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಮೊಹಂತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.