ಬೆಳ್ತಂಗಡಿ : ಎಸ್.ಐ.ಟಿ ಮುಖ್ಯಸ್ಥರಾದ ಡಾ.ಪ್ರಣವ್ ಮೊಹಾಂತಿ ಇಂದು (ಶುಕ್ರವಾರ, ಸೆ.05) ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆಗೆ ಚುರುಕು ಮುಟ್ಟಿಸಿದ್ದು, ಹಲವು ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದೆ, ಸಾಕ್ಷಿ ದೂರುದಾರ ಚಿನ್ನಯ್ಯ ತಂದಿರುವ ಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಇಂದು ಅತ್ಯಂತ ಮಹತ್ವದ ಬೆಳವಣಿಗೆಗಳು ನಡೆಯುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.
“ಎಸ್‌ಐಟಿ ಕಚೇರಿಯಲ್ಲಿ ಗಿರೀಶ್ ಮಟ್ಟಣ್ಣನವರ್ :”
ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ವಿಚಾರಣೆಗಾಗಿ ಸೌಜನ್ಯ ಪರ ಹೋರಾಗಾರ ಗಿರೀಶ್ ಮಟ್ಟಣ್ಣನವರ್ ಇಂದು (ಶುಕ್ರವಾರ) ಬೆಳಗ್ಗೆ ಆಗಮಿಸಿದ್ದಾರೆ. ಯೂಟ್ಯೂಬರ್ ಅಭಿಷೇಕ್ ಕಳೆದ ಮೂರು ದಿನಗಳಿಂದ ಎಸ್‌ಐಟಿ ವಿಚಾರಣೆ ಎದುರಿಸುತ್ತಿದ್ದಾರೆ.
ಮಾತ್ರವಲ್ಲದೇ, ಜಯಂತ್ ಟಿ. ನಿನ್ನೆ (ಗುರುವಾರ) ಸಂಜೆ ವಿಚಾರಣೆಗಾಗಿ ಬಂದವರು ಇನ್ನೂ ಎಸ್‌ಐಟಿ ಠಾಣೆಯಲ್ಲೇ ಇದ್ದಾರೆ ಎನ್ನುವ ಮಾಹಿತಿ ಇದೆ.
ಇಂದು ಎಸ್.ಐ.ಟಿ ಕಚೇರಿಗೆ ಆಗಮಿಸಿ ಪ್ರಣವ್ ಮೊಹಂತಿ ಅವರೇ ಖುದ್ದಾಗಿ ವಿಚಾರಣೆ ಮಾಡಲಿದ್ದಾರೆ ಎನ್ನುವ ಮಾಹಿತಿಯನ್ನೂ ಸುದ್ದಿ ಮೂಲಗಳು ನೀಡಿವೆ.