ಮಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ.
ಎಸ್‌ಐಟಿ ಜಯಂತ್ ಮತ್ತು ಯಟ್ಯೂಬರ್ ಅಭಿಷೇಕ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು. ಈ ವೇಳೆ “ಬುರುಡೆ ಸಿಕ್ಕಿದ್ದು ಎಲ್ಲಿ ?”ಎಂಬ ಪ್ರಶ್ನೆಗೆ ಜಯಂತ್ ಮಟ್ಟಣ್ಣನವರ್ ಹೆಸರನ್ನು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಧರ್ಮಸ್ಥಳದಲ್ಲಿ ಅಸಹಜ ಸಾವಿಗೀಡಾದ ಶವಗಳನ್ನು ಧರ್ಮಸ್ಥಳ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ “ಪ್ರಭಾವಿ” ವ್ಯಕ್ತಿಯ ಸೂಚನೆಯ ಅನುಸಾರ ಹೂತಿದ್ದೇನೆ ಎಂದು ಆರೋಪಿಸಿ ಮುಸುಕುದಾರಿ ದೂರುದಾರ(ಚಿನ್ನಯ್ಯ) ಚೀಲದಲ್ಲಿ ಬುರುಡೆ ಹಿಡಿದುಕೊಂಡು ಬಂದು ನ್ಯಾಯಾಲಯಕ್ಕೆ ಒಪ್ಪಿಸಿದ್ದ. ಬಳಿಕ ಪ್ರಕರಣಕ್ಕೆ ಸಂಬಂಧಿಸಿಂತೆ ವಿಶೇಷ ತನಿಖಾ ತಂಡ ರಚನೆಯಾಗಲು ಕಾರಣವಾಗಿರುವ ಬುರುಡೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟ ಉತ್ತರ ದೊರಕಿರಲಿಲ್ಲ. ಈ ಪ್ರಶ್ನೆಗೆ ಎಸ್‌ಐಟಿ ಉತ್ತರ ಹುಡುಕುತ್ತಿದೆ. ತಿಮರೋಡಿ ತೋಟದಿಂದ ಬುರುಡೆ ತಂದು ನ್ಯಾಯಾಲಯಕ್ಕೆ ನೀಡಿರುವ ಅನುಮಾನ ವ್ಯಕ್ತವಾಗಿತ್ತು. ಈಗ ಎಸ್.ಐ.ಟಿ ವಿಚಾರಣೆಯಲ್ಲಿ ಜಯಂತ್ ಮಟ್ಟಣ್ಣವರ್ ಹೆಸರು ಪ್ರಸ್ತಾಪಿಸಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.