ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣ ದಿನ ನಿತ್ಯವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಚುರುಕು ಪಡೆದುಕೊಂಡಿದೆ. ಪ್ರಕರಣಕ್ಕೆ ಪಕ್ಷದ ರಾಜ್ಯ ಕೇರಳದ ಕಮ್ಯೂನಿಸ್ಟ್ (ಸಿಪಿಐ) ಸಂಸದ ಸಂತೋಷ್ ಕುಮಾರ್ ಕೂಡ ಭಾಗಿಯಾಗಿದ್ದಾರೆ ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಸಾಕ್ಷಿ ದೂರುದಾರ ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಕೇರಳದ ಸಂಸದನ ಬಳಿಗೆ ತಲೆ ಬರುಡೆಯನ್ನು ತೆಗೆದುಕೊಂಡು ಹೋಗಿ ಅವರ ಮುಂದೆ ವಿಚಾರ ಪ್ರಸ್ತಾಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಎಸ್ಐಟಿ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಮೂಲಗಳು ತಿಳಿಸಿವೆ.
11 ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿ ತನಿಖೆ
ಧರ್ಮಸ್ಥಳ ಪ್ರಕರಣವನ್ನು ಎಸ್ಐಟಿ ಪೊಲೀಸರು ಈವರೆಗೆ ಒಟ್ಟು 11 ಸೆಕ್ಷನ್ಗಳ ಅಡಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈವರೆಗಿನ ತನಿಖೆಯಲ್ಲಿ ಬೆಳಕಿಗೆ ಬಂದ ವಿಚಾರಗಳನ್ನು ಆಧರಿಸಿ ಸೆಕ್ಷನ್ಗಳನ್ನು ಅಳವಡಿಕೆ ಮಾಡಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್.ಐ.ಆರ್ ನಂಬರ್ 39/2025 ರಲ್ಲಿ ಬಿ.ಎನ್ೆಸ್ 211(A), 336, 230, 231, 229, 227, 228, 240, 236, 233, 248 ಸೆಕ್ಷನ್ ಅಳವಡಿಕೆ ಮಾಡಲಾಗಿದೆ.
ಧರ್ಮಸ್ಥಳ ಪ್ರಕರಣ : ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲು !?
- ಬಿ.ಎನ್.ಎಸ್ 211(ಎ) – ಅಧಿಕಾರಿಗೆ ಕಾನೂನಾತ್ಮಕವಾಗಿ ನೀಡಬೇಕಾದ ಮಾಹಿತಿಯನ್ನು ನೀಡದೆ ಉದ್ದೇಶಪೂರ್ವಕವಾಗಿ ತಪ್ಪಿಸುವುದು.
- ಬಿ.ಎನ್.ಎಸ್ 336 – ನಕಲಿ ದಾಖಲೆ ಸೃಷ್ಟಿಸುವುದು.
- ಬಿ.ಎನ್.ಎಸ್ 230 – ಸುಳ್ಳು ಸಾಕ್ಷಿ ನೀಡಲು ಅಥವಾ ಸುಳ್ಳು ಸಾಕ್ಷಿ ತಯಾರಿಸುವುದು.
- ಬಿ.ಎನ್.ಎಸ್ 231 – ಜೀವಾವಧಿ ಶಿಕ್ಷೆ ಅಥವಾ ಜೈಲು ಶಿಕ್ಷೆ ವಿಧಿಸಬಹುದಾದ ಅಪರಾಧದ ಬಗ್ಗೆ ಸುಳ್ಳು ಸಾಕ್ಷ್ಯ ನೀಡುವುದು ಅಥವಾ ಅದನ್ನು ಸೃಷ್ಟಿಸುವುದು.
- ಬಿ.ಎನ್.ಎಸ್ 229 – ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸುಳ್ಳು ಪುರಾವೆ ನೀಡುವುದು.
- ಬಿ.ಎನ್.ಎಸ್ 227 – ಸುಳ್ಳೆಂದು ತಿಳಿದಿದ್ದರೂ ಸುಳ್ಳು ಸಾಕ್ಷ್ಯವನ್ನು ಹೇಳುವುದು.
- ಬಿ.ಎನ್.ಎಸ್ 228 – ನ್ಯಾಯಾಂಗ ಅಥವಾ ಕಾನೂನು ಪ್ರಕ್ರಿಯೆಯನ್ನು ದಾರಿತಪ್ಪಿಸುವ ಉದ್ದೇಶದಿಂದ, ಪುಸ್ತಕಗಳು ಅಥವಾ ದಾಖಲೆಗಳಲ್ಲಿ ಸುಳ್ಳು ನಮೂದುಗಳನ್ನು ಮಾಡುವುದು.
- ಬಿ.ಎನ್.ಎಸ್ 240 – ಅಪರಾಧದ ಬಗ್ಗೆ ತಪ್ಪು ಮಾಹಿತಿ ನೀಡುವುದು.
- ಬಿ.ಎನ್.ಎಸ್ 236 – ನ್ಯಾಯಾಲಯಕ್ಕೆ ತಾನು ನೀಡಿದ ಮಾಹಿತಿ ಸುಳ್ಳು ಎಂದು ತಿಳಿದಿದ್ದರೂ ಅಥವಾ ನಂಬದಿದ್ದರೂ, ಅದನ್ನು ನಿಜವೆಂದು ಹೇಳುವುದು.
- ಬಿ.ಎನ್.ಎಸ್ 233 – ನ್ಯಾಯಾಲಯದಲ್ಲಿ ಸುಳ್ಳು ಎಂದು ತಿಳಿದಿರುವ ಯಾವುದೇ ಪುರಾವೆಯನ್ನು ನಿಜವಾದ ಪುರಾವೆಯಂತೆ ಬಳಸಲು ಪ್ರಯತ್ನಿಸುವುದು, ಈಗಾಗಲೇ ಸುಳ್ಳು ಎಂದು ತಿಳಿದಿರುವ ಪುರಾವೆಯನ್ನು ಬಳಸುವುದು.
- ಬಿ.ಎನ್.ಎಸ್ 248 – ಒಬ್ಬ ವ್ಯಕ್ತಿಯನ್ನು ಹಾನಿ ಮಾಡುವ ದುರುದ್ದೇಶದಿಂದ, ಅವನ ಮೇಲೆ ಯಾವ ಕಾನೂನು ಆಧಾರಗಳೂ ಇಲ್ಲದಿದ್ದರೂ ಸುಳ್ಳು ಅಪರಾಧದ ಆರೋಪ ಹೊರಿಸುವುದು.