ಬೆಳ್ತಂಗಡಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರ ಗುರುತಿಸುವ ಸ್ಥಳಗಳ ಪೈಕಿ 13ನೇ ಸ್ಥಳಲ್ಲಿ ಜಿ.ಪಿ.ಆರ್ (ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್) ಬಳಸಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ.
ಸೋಮವಾರವೇ ಎಸ್.ಐ.ಟಿ ಅಧಿಕಾರಿಗಳು ಜಿಪಿಆರ್ ತರಿಸಿದ್ದು, ಕ್ಲಿಷ್ಟಕರವಾದ 13ನೇ ಸ್ಥಳದಲ್ಲಿ ಕಾರ್ಯಾಚರಣಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಇಂದು(ಮಂಗಳವಾರ) ಅಧಿಕೃತವಾಗಿ ಪರಿಶೀಲನಾ ಕಾರ್ಯ ಮಾಡಲಿದೆ.
ನೇತ್ರಾವತಿ-ಅಜೆಕುರಿ ರಸ್ತೆಯಲ್ಲಿ ನೇತ್ರಾವತಿ ನದಿ ಸಮೀಪದಲ್ಲೇ ಇರುವ ಕಿಂಡಿ ಅಣೆಕಟ್ಟಿನ ಬಳಿ ಸಾಕ್ಷಿ ದೂರುದಾರ ಗುರುತಿಸಿದ 13ನೇ ಸ್ಥಳವಿದೆ. ಅಲ್ಲಿ ಸೋಮವಾರ ಮಧ್ಯಾಹ್ನ 3ರಿಂದ 3:30ರವರೆಗೆ ಡ್ರೋನ್ ಆಧಾರಿತ ಜಿಪಿಆರ್ ಪ್ರಾಯೋಗಿಕ ಕಾರ್ಯಾಚರಣೆ ಮಾಡಿದೆ. ಬಳಿಕ ಪೌರ ಕಾರ್ಮಿಕರು ಸುಮಾರು 60 ಅಡಿ ಉದ್ದದ, 30 ಅಡಿ ಅಗಲದ ಈ ಸ್ಥಳದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತರೆವುಗೊಳಿಸಿದ್ದರು.
ಇಂದು ಸ್ಥಳದಲ್ಲಿ ಎಸ್.ಐ.ಟಿ ತಂಡದ ನೇತೃತ್ವದಲ್ಲಿ ಜಿಪಿಆರ್ ಮೂಲಕ ಪರಿಶೀಲನೆ ನಡೆಯಲಿದೆ.
“ಸ್ಥಳದಲ್ಲಿ ಬಿಗು ಬಂದೋಬಸ್ತ್”
ಕಾರ್ಯಾಚರಣೆ ನಡೆಯಲಿರುವ ನೇತ್ರಾವತಿ ಅಜಿಕುರಿ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ. ರಸ್ತೆಯ ಎರಡೂ ಬದಿಯಲ್ಲಿ ನಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ಸ್ಥಳದಲ್ಲಿಯೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.