ಬೆಂಗಳೂರು : ಧರ್ಮಸ್ಥಳ ಅಪಪ್ರಚಾರದ ಬಗ್ಗೆ ನಾನು ಮೊದಲು ಧ್ವನಿ ಎತ್ತಿದೆ. 400ಕ್ಕೂ ಹೆಚ್ಚು ಮುಖಂಡರು ಅಲ್ಲಿಗೆ ಜಾಥಾದ ಮೂಲಕ ತೆರೆಳಿದೆವು. ನಾವು ಎಲ್ಲಿಯೂ ಬಿಜೆಪಿಯ ಬಾವುಟ ಹಿಡಿದಿಲ್ಲ. ಭಗವಾಧ್ವಜ ಹಿಡಿದಿದ್ದೇವೆ. ನಾವೆಲ್ಲಿ ರಾಜಕೀಯ ಮಾಡಿದ್ದೇವೆ ಎಂದು ಶಾಸಕ ಎಸ್. ಆರ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಧಾರ್ಮಿಕ ವಿಚಾರದಲ್ಲಿ ಎಂದೂ ನಾವು ರಾಜಕೀಯ ಮಾಡಲ್ಲ. ಜಗದೀಶ್ ಎನ್ನುವವರು ಒಬ್ಬರಿದ್ದಾರೆ (ಲಾಯರ್ ಜಗದೀಶ್). “ಏನೇನೋ ಸುಖಾಸುಮ್ಮನೆ ಅವನು ಮಾತನಾಡುತ್ತಾನೆ. ಆತ ಮಾತನಾಡುವುದು ಎಲ್ಲವೂ ಸುಳ್ಳು. 100 ಕೋಟಿ ಹಣ ಹೆಗಡೆ ಮೈಕ್ರೋ ಫೈನಾನ್ಸ್ ನಲ್ಲಿದೆ. 100 ಕೋಟಿ ಅಲ್ಲಿ ಇಟ್ಟಿದ್ದೇನೆಂದು ಹೇಳಿದ್ದಾನೆ. ಅವನು ಈ ರೀತಿ ಬರೀ ಸುಳ್ಳುಗಳನ್ನೇ ಹೇಳುತ್ತಾನೆ. ಒಂದು ವೇಳೆ ಅವನು ದಾಖಲೆ ಸಮೇತ ನೀಡಿದರೆ, ನಾನು ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ” ಎಂದಿದ್ದಾರೆ.
“ಅವನ್ಯಾರೋ ಸಿಎಂ ಕೊಲೆ ಮಾಡಿದ್ದಾರೆ” ಎಂದು ಹೇಳುತ್ತಾನೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಬಗ್ಗೆ ಪರೋಕ್ಷವಾಗಿ ಏಕ ವಚನದಲ್ಲೇ ಸಿಟ್ಟಾದ ಶಾಸಕರು, ಮುಖ್ಯಮಂತ್ರಿ ಅಂದರೆ ನಮಗೂ ಮುಖ್ಯಮಂತ್ರಿಗಳೇ ಆಗಿದ್ಧಾರೆ. ಸರ್ಕಾರ ಸುಮ್ಮನೇ ಕೂತು ಎಲ್ಲವನ್ನೂ ನೋಡುತ್ತಿದೆ” ಎಂದು ಹೇಳಿದ್ದಾರೆ.



















