ಬೆಂಗಳೂರು : ಧರ್ಮಸ್ಥಳ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ಸ್ಪಷ್ಟ. ಧರ್ಮಸ್ಥಳ ಶ್ರೀಕ್ಷೇತ್ರ ರಾಜಕೀಯ ವಸ್ತು ಅಲ್ಲ. ಧರ್ಮಸ್ಥಳದ ವಿಚಾರದಲ್ಲಿಯೂ ಬಿಜೆಪಿ ನಾಯಕರು ರಾಜಕೀಯ ಮಾಡುವುದಕ್ಕೆ ಹೊರಟಿದ್ದಾರೆ. ಧರ್ಮಸ್ಥಳವನ್ನು ಬೆಂಬಲಿಸಿ ಬಿಜೆಪಿ ನಾಯಕರು ಹೇಳಿಕೆ ನೀಡಿಲ್ಲ. ತನಿಖೆ ವೇಳೆ ಅವರು ನೀಡಿಲ್ಲ. ಎಸ್ ಐಟಿ ತನಿಖೆ ನಡೆಯುತ್ತಿದೆ. ತನಿಖೆ ವೇಳೆ ರಾಜಕೀಯ ಅವಶ್ಯಕತೆ ಇಲ್ಲ. ಧರ್ಮಸ್ಥಳದ ಪರವಾಗಿ ನಾವಿದ್ದೇವೆ ಅಂದಿದ್ದರು ಉಪಮುಖ್ಯಮಂತ್ರಿಗಳೇ ಮೊದಲು ಈ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದು ಮಾಜಿ ಸಂಸದ ಡಿ. ಕೆ ಸುರೇಶ್ ಹೇಳಿದ್ದಾರೆ.
ವರದಿಗರರಿಗೆ ಸ್ಪಂದಿಸಿ ಮಾತನಾಡಿದ ಡಿಕೆಸು, ಬಿಜೆಪಿಯವರು ಧರ್ಮಸ್ಥಳಕ್ಕೆ ತರಾತುರಿ ಯಾತ್ರೆ ಮಾಡಿದ್ದಾರೆ. ಬಿಜೆಪಿ ನಾಯಕರು ಯಾರಗೆ ಸಾಂತ್ವಾನ ಮಾಡುವುದಕ್ಕೆ ಹೊರಟಿದ್ದಾರೆ. ಕರಾವಳಿ ಜನರಿಗೆ ಈಗಾಗಲೇ ನಿಮ್ಮ (ಬಿಜೆಪಿ ನಾಯಕರ) ನಾಟಕದ ಬಗ್ಗೆ ಗೊತ್ತಿದೆ ಎಂದು ಬಿಜೆಪಿ ಬಗ್ಗೆ ಹರಿಹಾಯ್ದಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಒಳ ರಾಜಕೀಯದಿಂದ ಕೆಟ್ಟ ಹೆಸರು ತರುತ್ತಿದ್ದಾರೆ. ಇನ್ನೊಂದೆಡೆ ಸೌಜನ್ಯ ಕುಟುಂಬಕ್ಕೂ ಸಾಂತ್ವಾನ ಹೇಳುವ ನಾಟಕ ಮಾಡುತ್ತಿದ್ದೀರಿ. ಅಲ್ಲಿ ಏನು ನಾಟಕ ಮಾಡಿದ್ದೀರಿ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಜನರನ್ನು ಹೇಗೆ ಮರಳು ಮಾಡಬೇಕೋ ವ್ಯವಸ್ಥಿತವಾಗಿ ಮರಳು ಮಾಡಿದ್ದಾರೆ. ಇವರಿಗೆ ಧರ್ಮಸ್ಥಳದ ಮೇಲೆ ಯಾವುದೇ ಗೌರವ, ಪ್ರೀತಿ ಯಾವುದೂ ಇಲ್ಲ ಎಂದಿದ್ದಾರೆ.


















