ಹುಬ್ಬಳ್ಳಿ: ಧರ್ಮಸ್ಥಳ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಅತೃಪ್ತದಾಯಕವಾಗಿದೆ ಎಂದು ಜೈನಮುನಿ ಗುಣಧರನಂದಿ ಮಹಾರಾಜ ತಿಳಿಸಿದ್ದಾರೆ.
ಧರ್ಮಸ್ಥಳದ ಮೇಲೆ ಆಗುತ್ತಿರುವ ಷಡ್ಯಂತ್ರದಿಂದ ಮನಸ್ಸಿಗೆ ಸಾಕಷ್ಟು ನೋವಾಗಿದ್ದು, ಕನ್ನಡ ನಾಡಿನಲ್ಲಿಇಂತಹ ಷಡ್ಯಂತ್ರ ನಡೆಯುತ್ತಿರುವುದು ಬೇಸರರದ ಸಂಗತಿಯಾಗಿದೆ. ಷಡ್ಯಂತ್ರದ ವಿರುದ್ಧ ಜನರು ಹದಿನೈದು ದಿನಗಳಿಂದ ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಷಡ್ಯಂತ್ರ ಮಾಡುವವರನ್ನು ಬಂಧಿಸುವಂತೆ ಆಗ್ರಹಿಸಿ ಸರ್ಕಾರಕ್ಕೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ. ಜನರು ಹೋರಾಟ ಮಾಡಿದರೂ, ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಮುಖ್ಯಮಂತ್ರಿ ಯಾವ ಮೂಲೆಯಲ್ಲಿ ಕುಳಿತಿದ್ದಾರೆ. ಮುಖ್ಯಮಂತ್ರಿ ಒಂದೇ ಒಂದು ಮಾತನ್ನು ಈ ಬಗ್ಗೆ ಸಹಾನುಭೂತಿಯಿಂದ ಮಾತನಾಡುತ್ತಿಲ್ಲ. ಆದ್ದರಿಂದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಳಿಗೆ ನಿಯೋಗ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಾಧು ಸಂತರಿರುವ ಒಂದು ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಲಿದೆ. ಈಗಾಗಲೇ ಕೇಂದ್ರದ ಗೃಹ ಮಂತ್ರಿಗೆ ಮನವಿ ಮಾಡುವ ಮೂಲಕ ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.