ಧರ್ಮಸ್ಥಳ: ಬರೀ ರಾಜ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲೇ ಸಂಚಲನ ಮೂಡಿಸಿದ ಧರ್ಮಸ್ಥಳದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
“ಇದೊಂದು ವ್ಯವಸ್ಥಿತ ಷಡ್ಯಂತ್ರ. ಇವೆಲ್ಲ ಅನಾವಶ್ಯಕವಾಗಿ ಮಾಡಿದ ಪ್ರಯತ್ನ. ಕ್ಷೇತ್ರ, ಕ್ಷೇತ್ರದ ಇತಿಹಾಸ, ಗೌರವ ಹಾಗೆಯೇ ಇದೆ. ಕ್ಷೇತ್ರದ ಬಗ್ಗೆ ಹಿಂದಿನಿಂದಲೂ ಷಡ್ಯಂತ್ರ ಮಾಡಲಾಗುತ್ತಿದೆ. ಎಸ್ಐಟಿ ತನಿಖೆಯನ್ನು ಸ್ವಾಗತಾರ್ಹ, ಇದು ಒಳ್ಳೆಯ ಕೆಲಸ. ಸತ್ಯ ಹೊರಗೆ ಬರಲಿ” ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ
“ಕ್ಷೇತ್ರದ ಬಗ್ಗೆ ನಿರಂತರ ಷಡ್ಯಂತ್ರ“
“ಎಷ್ಟೇ ಆರೋಪ ಮಾಡಿದರೂ ಕ್ಷೇತ್ರದಲ್ಲಿ ಎಲ್ಲವೂ ಯಥಾಸ್ಥಿತಿಯಲ್ಲಿದೆ. ಭಕ್ತರು ಎಲ್ಲಾ ಕಡೆಯಿಂದಲೂ ಹೆಚ್ಚಾಗಿ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಹಿಂದಿನಿಂದಲೂ ಸೂಕ್ಷ್ಮವಾಗಿ ಯೋಜನೆ ಮಾಡಿ, ಕ್ಷೇತ್ರದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಎಸ್ಐಟಿ ತನಿಖೆ ನಡೆಯುತ್ತಿರುವುದು ಸ್ವಾಗತ. ಸತ್ಯಾಸತ್ಯತೆ ಹೊರಬರುತ್ತದೆ. ಎಲ್ಲಾ ಸತ್ಯ ಹೊರಬರಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಭಕ್ತರಿಗೆ ಬೇಸರವಾಗಿದೆ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ.



















