ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ (SIT) ಬಂಧನಕ್ಕೆ ಒಳಗಾದ ಮಾಸ್ಕ್ ಮ್ಯಾನ್ ಚಿನ್ನಯ್ಯನಿಗೆ ಕೊನೆಗೂ ಜೈಲಿನಿಂದ ಬಿಡುಗಡೆ ಭಾಗ್ಯ ಒದಗಿಬಂದಿದೆ.
ಜಾಮೀನು ಸಿಕ್ಕಿದ್ದರೂ ಸಹ ಶ್ಯೂರಿಟಿ ಇಲ್ಲದೇ ಶಿವಮೊಗ್ಗದ ಜೈಲಿನಲ್ಲಿ ಚಿನ್ನಯಯ್ಯ ಮಂಕಾಗಿದ್ದನು. ಇದೀಗ ಒಂದು ಲಕ್ಷ ಬಾಂಡ್, ಇಬ್ಬರು ಜಾಮೀನುದಾರರಿಂದ ಬೆಳ್ತಂಗಡಿ ಕೋರ್ಟ್ಗೆ ಶ್ಯೂರಿಟಿ ನೀಡಲಾಗಿದೆ. ಇದರಿಂದ ಆರೋಪಿ ಬುರುಡೆ ಚಿನ್ನಯ್ಯ ಬಿಡುಗಡೆಗೆ ನ್ಯಾಯಾಧೀಶರು ಅಸ್ತು ಎಂದಿದ್ದಾರೆ. ಹೀಗಾಗಿ ಚಿನ್ನಯ್ಯನಿಗೆ ಜಾಮೀನು ಸಿಕ್ಕು 23 ದಿನಗಳ ಬಳಿಕ ಬಂಧನದಿಂದ ಮುಕ್ಸಿ ಸಿಕ್ಕಂತಾಗಿದೆ.
ಇಂದು (ಡಿ. 17) ಚಿನ್ನಯ್ಯ ಪತ್ನಿ ಮಲ್ಲಿಕಾ ಒಂದು ಲಕ್ಷ ಬಾಂಡ್ ಕೊಟ್ಟಿದ್ದು, ಜೊತೆಗೆ ಇಬ್ಬರು ಜಾಮೀನುದಾರರು ಮತ್ತು ಒಬ್ಬರ ಶ್ಯೂರಿಟಿ ಕೊಡಿಸಿದ್ದಾರೆ. ಬಳಿಕ ಕೋರ್ಟ್ ಚಿನ್ನಯ್ಯನ ಬಿಡುಗಡೆಗೆ ಆದೇಶ ಹೊರಡಿಸಿದೆ. ಸದ್ಯ ಕೋರ್ಟ್‌ನ ಆದೇಶ ಹಿಡಿದು ಮಲ್ಲಿಕಾ ಮತ್ತು ಸಹೋದರಿ ರತ್ನ ಶಿವಮೊಗ್ಗ ಜೈಲಿನತ್ತ ಪ್ರಯಾಣ ಬೆಳೆಸಿದ್ದು, ಇಂದು ಸಂಜೆ ವೇಳೆಗೆ ಶಿವಮೊಗ್ಗ ಜೈಲಿನಿಂದ ಚಿನ್ನಯ್ಯನ ಬಿಡುಗಡೆಯಾಗುವ ಸಾಧ್ಯತೆಗಳಿವೆ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ನಾಲ್ಕು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನಿಗೆ ನವೆಂಬರ್ 24ರಂದು ಜಾಮೀನು ಸಿಕ್ಕಿತ್ತು. 1 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿಯೊಂದಿಗೆ 12 ಷರತ್ತು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದ್ರೆ, ಜಾಮೀನು ಸಿಕ್ಕಿದರೂ ಚಿನ್ನಯ್ಯನಿಗೆ ಶ್ಯೂರಿಟಿ ನೀಡಲು ಯಾರೂ ಮುಂದೆ ಬಂದಿರಲಿಲ್ಲ.
ಇದನ್ನೂ ಓದಿ : ‘ಕೊಂದವರು ಯಾರು?’ | ಬೆಳ್ತಂಗಡಿಯಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆಗೆ ಇಳಿದ ತಾಯಂದಿರು



















