ಬೆಳ್ತಂಗಡಿ: ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ 3ನೇ ದಿನ(ಜುಲೈ 30)ವಾದ ಇಂದು ಬೆಳಗ್ಗೆ 11 ಗಂಟೆಗೆ ನೇತ್ರಾವತಿ ಅರಣ್ಯ ಪ್ರದೇಶಕ್ಕೆ ಎಸ್.ಐ.ಟಿ ಅಧಿಕಾರಿಗಳೊಂದಿಗೆ ಅನಾಮಿಕನ ಹಾಜರಾಗಿದ್ದಾರೆ.
ಅರಣ್ಯ ಪ್ರದೇಶವಾದ್ದರಿದ ಹಿಟಾಚಿ ತೆರಳಲು ಅವಕಾಶವಿಲ್ಲದೇ ಇರುವುದರಿಂದ ಪೌರಕಾರ್ಮಿಕರ ಸಹಾಯದೊಂದಿಗೆ ಮಹಜರು ಮಾಡಿದ 2ನೇ ಸ್ಥಳದ ಕಾರ್ಯಾಚರಣೆಗೆ ಸಿದ್ಧತೆ ನಡೆಸಿಕೊಳ್ಳಲಾಗಿದೆ.
ಎಸ್.ಐ.ಟಿ. ತನಿಖಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ, ಎಸ್ಪಿ ಸೈಮನ್, ಪುತ್ತೂರು ಎ.ಸಿ. ಸ್ಟೆಲ್ಲಾ ವರ್ಗೀಸ್, ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ, ಐ.ಎಸ್.ಡಿ ವಿಭಾಗ, ಎಫ್.ಎಸ್.ಎಲ್ ವಿಭಾಗ, ಕಂದಾಯ ವಿಭಾಗ, ಅರಣ್ಯ ಇಲಾಖೆ ಪ್ರಮುಖರು ಸ್ಥಳದಲ್ಲಿ ಹಾಜರಿದ್ದಾರೆ.