ಬೆಳಗಾವಿ: ಬೆಳಗಾವಿಯಲ್ಲಿ ನಡೆದ ಮಹಾವೀರ ಜಯಂತಿ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಧರ್ಮಸ್ಥಳ ಬುರುಡೆ ಗ್ಯಾಂಗ್ ಪ್ರಕರಣದ ಟ್ಯಾಬ್ಲೋ ಎಲ್ಲರ ಗಮನ ಸೆಳೆದಿದೆ.
ಬೆಳಗಾವಿ ನಗರದ ಜೈನ ಸಮಾಜದಿಂದ ಆಯೋಜಿಸಿದ್ದ ಮಹಾವೀರ ಜಯಂತಿಯ ಮೆರವಣಿಗೆಯಲ್ಲಿ ವಿಶೇಷವಾಗಿ ಧರ್ಮಸ್ಥಳದ ಬುರುಡೆ ಪ್ರಕರಣ ಕುರಿತಾದ ಟ್ಯಾಬ್ಲೋ ಮಾಡಲಾಗಿತ್ತು.
ಈ ಟ್ಯಾಬ್ಲೋದಲ್ಲಿ ಸತ್ಯಕ್ಕೆ ಜಯ, ಸುಳ್ಳಿಗೆ ಸೋಲು ಎನ್ನುವ ತಕ್ಕಡಿ ಪ್ರದರ್ಶನ ಮಾಡಲಾಗಿದ್ದು, ಆ ತಕ್ಕಡಿಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಭಾವಚಿತ್ರ, ಮತ್ತೊಂದೆಡೆ ಧರ್ಮಸ್ಥಳದ ವಿರುದ್ಧ ಕುತಂತ್ರ ಮಾಡಿರೋ ಮುಸುಕುದಾರಿ ಸೇರಿ ಮೂವರ ಭಾವಚಿತ್ರ ಪ್ರದರ್ಶಿಸಲಾಗಿದೆ. ಈ ಮೂಲಕ ಧರ್ಮಸ್ಥಳಕ್ಕೆ ಅಂಟಿದ ಕಳಂಕ ದೂರಾಗಿದೆ ಎಂಬ ಸಂದೇಶ ರವಾನಿಸಲಾಗಿದೆ.
ಇದನ್ನೂ ಓದಿ : ಸರ್ಕಾರಿ ಕಟ್ಟಡಗಳೇ ಕೋಟ್ಯಾಂತರ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವೆ – ದಾಖಲೆಗಳೊಂದಿಗೆ N.R ರಮೇಶ್ ಆರೋಪ



















