ಬೆಳಗಾವಿ: ಪರಮಾತ್ಮ ಬಂದು ಕರೆದುಕೊಂಡು ಹೋಗುತ್ತಾನೆಂದು 21 ಜನ ಭಕ್ತರು ದೇಹತ್ಯಾಗ ಮಾಡಲು ಯತ್ನಿಸಿದ ವಿಚಿತ್ರ ಮೌಢ್ಯಾಚಾರಣೆಯ ಘಟನೆಯೊಂದು ನಡೆದಿದೆ.
ಜಿಲ್ಲೆಯ ಅಥಣಿ ತಾಲೂಕಿನ ಅನಂತಪೂರ ಗ್ರಾಮದಲ್ಲಿ ಈ ಘಟನೆ ನಡೆದಿದೆ.`ಪರಮಾತ್ಮ ಬಂದು ನಮ್ಮನ್ನು ಕರೆದುಕೊಂಡು ಹೋಗುತ್ತಾನೆಂದು 21 ಜನ ಭಕ್ತರು ದೇಹತ್ಯಾಗ ಮಾಡಲು ಮುಂದಾಗಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ ಸಂಪಂಗಾಂವಿ, ಪೊಲೀಸರು, ಮಠಾಧೀಶರಿಂದ ಮನವೊಲಿಕೆ ಮಾಡಿ ದೇಹತ್ಯಾಗ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ.
ಇವರೆಲ್ಲ 2014ರ ಗಲಭೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಹರಿಯಾಣದ ವಿವಾದಾತ್ಮಕ ಸಂತ ರಾಮಪಾಲ ಅನುಯಾಯಿಗಳು ಎನ್ನಲಾಗಿದೆ.



















