ಹಾಸನ : ಧರ್ಮಸ್ಥಳ ಮತ್ತು ದೇವಸ್ಥಾನದ ಆಡಳಿತಾಧಿಕಾರಿ ಪರವಾಗಿ ಹಾಸನದ ಜಿಲ್ಲಾಧಿಕಾರಿ ಕಚೇರಿ ಎದರು ಭಕ್ತರು ಪ್ರತಿಭಟನೆ ನಡೆಸಿದರು.
ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ವಿರೋಧಿಸಿ ನೂರಾರು ಹಿಂದೂಪರ ಕಾರ್ಯಕರ್ತರು, ವಕೀಲರು, ಭಕ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಹಾಗೂ ಕೋರ್ಟ್ ಕಾರ್ಯಕಲಾಪವನ್ನು ಬಹಿಷ್ಕರಿಸಿ ವಕೀಲರ ಸಂಘದಿಂದ ಪ್ರತಿಭಟನೆಗೆ ಬೆಂಬಲ ನೀಡಲಾಯಿತು.
ಅಂತರರಾಷ್ಟ್ರೀಯ ಮಟ್ಟದ ಷಡ್ಯಂತ್ರಕ್ಕೆ ಧರ್ಮಸ್ಥಳವನ್ನು ಗುರಿಯಾಗಿಸುತ್ತಿದ್ದಾರೆ.
ಮೊದಲು ಶಬರಿಮಲೆಯನ್ನು ಗುರಿಯಾಗಿಸಿದ್ದರು ಈಗ ಧರ್ಮಸ್ಥಳವನ್ನು ಗುರಿಯಾಗಿಸಲಾಗಿದೆ. ಇಂತಹ ಬುದ್ಧಿ ಜೀವಿಗಳ ಕೃತ್ಯಕ್ಕೆ ನಮ್ಮ ದಿಕ್ಕಾರವಿದೆ. ಧರ್ಮಸ್ಥಳದ ಬಗ್ಗೆ ಯಾರೊ ಒಬ್ಬ ಹೇಳಿದ ಎಂಬ ಕಾರಣಕ್ಕೆ ಎಸ್‌ಐಟಿ ತನಿಖೆ ನಡೆಸುತ್ತಿದ್ದೀರಿ, ನೀವು ಹಿಂದೂ ಧರ್ಮದ ವಿರುದ್ಧ ನಡೆಯುತ್ತಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಸಿದ್ದರಾಮಯ್ಯ ಅವರೇ, ನೀವು ಕೊನೆಯ ಬಾರಿ ಅಧಿಕಾರ ನಡೆಸುತ್ತಿದ್ದೀರಿ ಸರಿಯಾಗಿ ಆಡಳಿತ ನಡೆಸಿ. ಇಲ್ಲವಾದರೆ ದೇವರ ಶಾಪಕ್ಕೆ, ಧರ್ಮದ ಶಾಪಕ್ಕೆ ಗುರಿಯಾಗಿತ್ತೀರಿ. ಇನ್ನೂ ಎರಡೋ ಮೂರೋ ತಿಂಗಳು ಅಧಿಕಾರದಲ್ಲಿ ಇರುತ್ತೀರಿ. ಸರಿಯಾಗಿ ಆಡಳಿತ ನಡೆಸಿ ನಿರ್ಗಮಿಸಿ ಎಂದು ಭಕ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.