ಉಡುಪಿ : ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ರಚಿಸಿ ದೇವಳದ ಕೊಠಡಿಗಳನ್ನು ಕಾಯ್ದಿರಿಸುವ ಹೆಸರಿನಲ್ಲಿ ವಂಚಿಸುತ್ತಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಅಧಿಕೃತ ವೆಬ್‌ಸೈಟ್ http://karnatakatemplesaccommodation.com ಬದಲಿಗೆ ಅಪರಿಚಿತರು ಅಕ್ರಮ ಲಾಭದ ಉದ್ದೇಶದಿಂದ karnataka temple accommodation ಎಂಬ ಹೆಸರಿನ ಅನಧಿಕೃತ ನಕಲಿ ವೆಬ್‌ಸೈಟ್‌ನ್ನು ರಚಿಸಿದ್ದು, ಈ ವೆಬ್‌ಸೈಟ್ ಮೂಲಕ ಹಲವು ಜನರಿಗೆ ಲಲಿತಾಂಬಿಕಾ ಅತಿಥಿ ಗೃಹದ ಕೊಠಡಿಯನ್ನು ಕಾಯ್ದಿರಿಸಿದ್ದಾರೆ. ನಂತರ ಅವರಿಂದ ವಾಟ್ಸಾಪ್ ಮೂಲಕ ಪೋನ್ ಪೇ ಕ್ಯೂಆರ್ ಕೋಡ್‌ನ್ನು ಕಳುಹಿಸಿ, ಹಣವನ್ನು ಪಡೆದು ನಕಲಿ ರಶೀದಿ ನೀಡಿ ವಂಚಿಸಿರುವುದು ಕಂಡುಬಂದಿದೆ.
ಈ ಸಂಬಂಧ ನಕಲಿ ವೆಬ್‌ಸೈಟ್ ಜಾಲವನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಮಾಲೂರು ಕ್ಷೇತ್ರದ ಮರು ಮತಎಣಿಕೆಗೆ ಚುನಾವಣಾ ಆಯೋಗದಿಂದ ಡೇಟ್ ಫಿಕ್ಸ್!



















