ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು, ದರ್ಶನ್ ಅಭಿಮಾನಿಗಳು ಅದೆಷ್ಟೋ ದಿನಗಳಿಂದ ಕಾಯುತ್ತಿದ್ದ ಗಳಿಗೆ ಇದೀಗ ಬಂದಿದೆ. ಈ ಚಿತ್ರ ಸಾಕಷ್ಟು ನಿರೀಕ್ಷೆಗಳೊಂದಿಗೆ ತೆರೆಗೆ ಬಂದಿದ್ದು, ಇಂದು ಬೆಳಗ್ಗೆ 6.30ಕ್ಕೆ ಶೋ ಆರಂಭ ಆಗಿದೆ. ಹೀಗಾಗಿ, ಇನ್ನು ಕೆಲವೇ ಗಂಟೆಗಳಲ್ಲಿ ಸಿನಿಮಾದ ಭವಿಷ್ಯ ನಿರ್ಧಾರವಾಗಲಿದೆ.

ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳಲ್ಲಿ ಇಂದು ಬೆಳಗ್ಗೆ 6:30ಕ್ಕೆ ಡೆವಿಲ್ ರಿಲೀಸ್ ಆಗಿದೆ. ನಗರದ ನರ್ತಕಿ ಥಿಯೇಟರ್ ಅಲ್ಲಿಯೇ ಫಸ್ಟ್ ಶೋ ಶುರು ಆಗಿದ್ದು, ಅಭಿಮಾನಿಗಳು ಚಿತ್ರಮಂದಿದ ಮುಂದೆ ಹಬ್ಬದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿಯೇ ಫ್ಯಾನ್ಸ್ ಬಂದಿದ್ದಾರೆ.

ತೆರೆ ಮೇಲೆ ಇದ್ರೆ ನೆಮ್ದಿಯಾಗ್ ಇರ್‌ಬೇಕ್ ಎಂದು ದರ್ಶನ್ ಬರುತ್ತಿದ್ದಂತೆಯೇ, ಅಭಿಮಾನಿಗಳು ಸ್ಕ್ರೀನ್ ಮುಂದೆ ಹೋಗಿದ್ದಾರೆ. ಅಲ್ಲಿಯೇ ದರ್ಶನ್ ರೀತಿಯೇ ಡ್ಯಾನ್ಸ್ ಮಾಡುವ ಪ್ರಯತ್ನ ಕೂಡ ಮಾಡಿದ್ದಾರೆ. ಇದ್ರೆ ನೆಮ್ದಿಯಾಗ್ ಇರ್‌ಬೇಕ್ ಅಂತಲೂ ಹಾಡಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್‌ಗಿಂತ ನನಗೆ ಬೇರೆ ಯಾವುದೂ ಮುಖ್ಯವಲ್ಲ : ಮದುವೆ ರದ್ದಾದ ಬಳಿಕ ಸ್ಮೃತಿ ಮಂಧಾನ ಮನದಾಳದ ಮಾತು



















