ಆನೇಕಲ್: ರಾಜ್ಯ ಗಡಿ ಅತ್ತಿಬೆಲೆಯಲ್ಲಿ ‘ಡೆವಿಲ್’ ದರ್ಬಾರ್ ಜೋರಾಗಿದ್ದು, ಫ್ಯಾನ್ಸ್ ಶೋಗೆ ಭರ್ಜರಿ ಸಿದ್ದತೆ ನಡೆಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಸರ್ಕಲ್‌ನಲ್ಲಿ ದಾಸನ 52 ಅಡಿ ಎತ್ತರದ ಕಟೌಟ್ ನಿರ್ಮಿಸಿ ಡೆವಿಲ್‌ಗೆ ಅದ್ಧೂರಿ ಸ್ವಾಗತ ನೀಡಿದ್ದಾರೆ.

ಅತ್ತಿಬೆಲೆ ಗೌರಿಶಂಕರ ಚಿತ್ರಮಂದಿರದಲ್ಲಿ 6:30ಕ್ಕೆ ಡೆವಿಲ್ ಶೋ ಶುರುವಾಗಿದ್ದು, ಈಗಾಗಲೇ ಗೌರಿಶಂಕರದ ಎಲ್ಲಾ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

ಡೆವಿಲ್ ಸಂಭ್ರಮದ ನಡುವೆ ಡಿ ಬಾಸ್ ಅಭಿಮಾನಿಗಳು ಜನಸೇವೆ ಮಾಡಲು ಮುಂದಾಗಿದ್ದು, ತಾಲ್ಲೂಕಿನ ಎಲ್ಲಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಲು ಸಜ್ಸಾಜಾಗಿದ್ಲುದಾರೆ. ಮರದ ತಿಮ್ಮಕ್ಕ ನೆನಪಿನಲ್ಲಿ 2 ಸಾವಿರ ಗಿಡ ನೆಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮಂಗಳಮುಖಿಯವರಿಗೆ ಸೀರೆ ಮತ್ತು ದಿನಸಿ ಕಿಟ್ ವಿತರಣೆಗೆ ಸಿದ್ದತೆ ಹಾಗೂ ಅಭಿಮಾನಿಗಳಿಗೆ ನಾಟಿ ಕೋಳಿ ಬಿರಿಯಾನಿ ಊಟ ವಿತರಣೆಗೆ ಸಿದ್ಧತೆ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ‘ಡೆವಿಲ್’ ಸಂಭ್ರಮಾಚರಣೆ
ಬಾಗಲಕೋಟೆ: ದರ್ಶನ ಅಭಿಯನದ ಡೆವಿಲ್ ಚಿತ್ರ ರಿಲೀಸ್ ಹಿನ್ನಲೆ ಮೊದಲ ಶೋ ಗೂ ಮುನ್ನ ದರ್ಶನ್ ಅಭಿಮಾನಿಗಳಿಂದ ಥಿಯೇಟರ್ ಮುಂದೆ ಸಂಭ್ರಮಾಚರಣೆ ಮಾಡಲಾಗಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರ ವಸಂತ ಟಾಕೀಸ್ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಬಾಸ್, ಬಾಸ್, ಡಿ ಬಾಸ್ ಎಂದು ಘೋಷಣೆ ಕೂಗಿ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ‘ಡೆವಿಲ್’ ಅಬ್ಬರ
ರಾಮನಗರ: ಚನ್ನಪಟ್ಟಣದಲ್ಲಿ ಡೆವಿಲ್ ಅಬ್ಬರ ಜೋರಾಗಿದ್ದು, ಚನ್ನಪಟ್ಟಣದ ಶಿವಾನಂದ – ಲಕ್ಷ್ಮಿ ಥಿಯೇಟರ್ ನಲ್ಲಿ ಅದ್ದೂರಿ ಪ್ರದರ್ಶನಗೊಳ್ಳುತ್ತಿದೆ.

ನಗರದ ಎರಡು ಚಿತ್ರಮಂದಿರದಲ್ಲೂ ಹೌಸ್ ಫುಲ್ ಪ್ರದರ್ಶನವಾಗುತ್ತಿದ್ದು, ಶಿವಾನಂದ ಥಿಯೇಟರ್ ನಲ್ಲಿ ಆನ್ ಲೈನ್ ಬುಕ್ಕಿಂಗ್ ಸಹ ಕ್ಲೋಸ್ ಆಗಿದೆ. ಇವತ್ತಿನ 5 ಶೋ ಸಹ ಬುಕ್ಕಿಂಗ್ ಆಗಿದ್ದು,ಇದೇ ಮೊದಲ ಬಾರಿಗೆ ದಾಖಲೆ ಟಿಕೆಟ್ ಸೇಲ್ ಆಗಿದೆ. ಇಂತಹ ಸಿನಿಮಾಗಳು ಕನ್ನಡದಲ್ಲಿ ಬರಬೇಕು ಥಿಯೇಟರ್ ಗಳು ಉಳಿಯುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಜೈ ಡಿಬಾಸ್ ಎಂದು ಅಭಿಮಾನಿಗಳ ಘೋಷಣೆ ಹಾಕಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಡೆವಿಲ್ ನೋಡಲು ಮುಗಿಬಿದ್ದ ಫ್ಯಾನ್ಸ್
ಚಿಕ್ಕಬಳ್ಳಾಪುರ: ದರ್ಶನ್ ನಟನೆಯ ಬಹುನಿರೀಕ್ಷಿತ ಸಿನಿಮಾ ಡೆವಿಲ್ ಚಿತ್ರ ವೀಕ್ಷಿಸಲು ಅಭಿಮಾನಿಗಳು ಮುಗಿ ಬಿದ್ದ ಆಗಮಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರದ ಬಾಲಜಿ ಚಿತ್ರ ಮಂದಿರದಲ್ಲಿ ಡೆವಿಲ್ ಸಿನಿಮಾ ಅದ್ದೂರಿ ಪ್ರದರ್ಶನವಾಗುತ್ತಿದ್ದು, ಅಭಿಮಾನಿಯೊಬ್ಬ ಕೈಯಲ್ಲಿ ಕರ್ಪೂರ ಹಚ್ಚಿ ದರ್ಶನ ಪೋಟೋಗೆ ಆರತಿ ಬೆಳಗಿಸಿದ್ದಾನೆ ಹಾಗೂ ದರ್ಶನ ಪೋಟೋಗೆ ಹಾಲಿನ ಅಭಿಷೇಕ, ಹೂಗಳನ್ನು ಹಾಕಿ ಕುಣಿದು ಕುಪ್ಪಳಿಸಿ ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ‘ಡೆವಿಲ್’ ದರ್ಶನ | 500ಕ್ಕೂ ಹೆಚ್ಚು ಪರದೆಗಳಲ್ಲಿ ದಾಸನ ಅಬ್ಬರ!



















