ನವದೆಹಲಿ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ(H.D Devegowda), ಪ್ರಧಾನಿ ನರೇಂದ್ರ ಮೋದಿ(Narendra Modi) ಅವರನ್ನು ಹಾಡಿ ಹೊಗಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದಾನಿಗಳ ಆಸ್ತಿ ದುರ್ಬಳಕೆಯಾಗುವುದನ್ನು ತಡೆಯಲು ಮುಂದಾಗಿದ್ದಾರೆ.ವಕ್ಫ್ ಬೋರ್ಡ್ ನ (Waqf Board) ಆಸ್ತಿ 1.2 ಲಕ್ಷ ಕೋಟಿ ರೂ. ಬೆಲೆ ಬಾಳುತ್ತದೆ. ದಾನಿಗಳ ಆಸ್ತಿ ದುರ್ಬಳಕೆಯಾಗುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ.
ರಾಜ್ಯಸಭೆಯಲ್ಲಿ ವಕ್ಫ್ ಮಸೂದೆಗೆ (Waqf Amendment Bill) ಬೆಂಬಲಿಸಿದ ಅವರು, ಈ ಆಸ್ತಿಯನ್ನು ಸರ್ಕಾರ ನೀಡಿಲ್ಲ. ದೇವರನ್ನು ನನ್ನ ಸ್ನೇಹಿತ ಅಲ್ಹಾ ಅಂತಾರೆ, ನಾನು ರಾಮ ಎನ್ನುತ್ತೇನೆ. ನಾನು ದೇವರಲ್ಲಿ ನಂಬಿಕೆ ಇಟ್ಟಿವನು. ತಿರುಪತಿ, ಅಜ್ಮೀರ್ ದರ್ಗಾ, ಗೊಲ್ಡನ್ ಟೆಂಪಲ್‌ಗೆ ಹೋಗುತ್ತೇನೆ. ವಕ್ಫ್ ಮಸೂದೆ ಮತ್ತು ಸರ್ಕಾರವನ್ನು ಬೆಂಬಲಿಸುತ್ತೇನೆ ಎಂದಿದ್ದಾರೆ.
ನಾನು ಸಿಎಂ ಆಗಿ ಅಲ್ಪ ಸಂಖ್ಯಾತರ ರಕ್ಷಣೆಗೆ ಸಾಕಷ್ಟು ಕಾರ್ಯ ಮಾಡಿದ್ದೇನೆ. ನಾನು ರೈತ. ಮುಸ್ಲಿಂ ಮಾತ್ರವಲ್ಲ ಬಹಳಷ್ಟು ಸಮುದಾಯಕ್ಕೆ ಮೀಸಲಾತಿ ನೀಡಿದ್ದೇನೆ ಎಂದಿದ್ದಾರೆ.