ದಕ್ಷಿಣ ಭಾರತದ ಖ್ಯಾತ ನಟ ಜೂ. ಎನ್ ಟಿಆರ್ ನಟಿಸಿರುವ ಕೊರಟಾಲ ಶಿವ ನಿರ್ದೇಶನದ ‘ದೇವರ’ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ.
ಈ ಚಿತ್ರಕ್ಕೆ ಆರಂಭದಿಂದಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ ಅಭಿಮಾನಿಗಳು ಮಾತ್ರ ಚಿತ್ರ ವೀಕ್ಷಣೆಗೆ ನುಗ್ಗುತ್ತಿದ್ದಾರೆ. ಹಲವರಂತೂ ಚಿತ್ರವನ್ನು ಮೆಚ್ಚುಕೊಂಡು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಹೆಚ್ಚಿನ ಗಳಿಕೆ ಮಾಡುತ್ತಿದೆ.
‘ದೇವರ’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್ ನಲ್ಲಿ ಬರೋಬ್ಬರಿ 77 ಕೋಟಿ ರೂ. ಗಳಿಕೆ ಮಾಡಿದೆ. ತೆಲುಗು ಭಾಷೆಯಿಂದ 68 ಕೋಟಿ ರೂ. ಹಿಂದಿಯಿಂದ 7 ಕೋಟಿ ರೂ., ಕನ್ನಡ ಹಾಗೂ ಮಲಯಾಳಂನಿಂದ ತಲಾ 30 ಲಕ್ಷ ರೂ, ಹಾಗೂ ತಮಿಳಿನಿಂದ 80 ಲಕ್ಷ ರೂ, ಗಳಿಕೆ ಮಾಡಿದೆ.
ವಿಶ್ವ ಬಾಕ್ಸ್ ಆಫೀಸ್ ನಲ್ಲಿ ಕೂಡ ದೇವರ ಅಬ್ಬರಿಸುತಿದೆ. ವಿಶ್ವ ಮಟ್ಟ ಸೇರಿದಂತೆ ಬರೋಬ್ಬರಿ 140 ಕೋಟಿ ರೂ. ಗಳಿಕೆ ಮಾಡಿದೆ. ಅಂದರೆ, ಭಾರತದ ಬಾಕ್ಸ್ ಆಫೀಸ್ ನಲ್ಲಿ ಎಷ್ಟು ಗಳಿಕೆ ಮಾಡಿದೆಯೋ ಅಷ್ಟು ಹಣವನ್ನು ವಿಶ್ವ ಮಟ್ಟದಲ್ಲೂ ಗಳಿಕೆ ಮಾಡಿದೆ. ಸಿನಿಮಾದಲ್ಲಿ ಅದ್ದೂರಿ ಸೆಟ್ ಗಳಿದ್ದವು. ಆದರೆ, ಕಥೆಯಲ್ಲಿ ಗಟ್ಟಿತನ ಇಲ್ಲವೆಂದು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದಾರೆ.