ಅಭಿಮಾನಿಗಳಿಗೆ ‘ದೇವರ’ ನಿರಾಸೆ ಮೂಡಿಸಿರುವ ಘಟನೆ ನಡೆದಿದೆ.
ಸೆ. 22ರಂದು ಜೂನಿಯರ್ ಎನ್ ಟಿಆರ್ ಅಭಿನಿಯಸಿದ್ದ ದೇವರ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಬೇಕಿತ್ತು. ಈ ಕಾರ್ಯಕ್ರಮ ಇದ್ದ ಹಿನ್ನೆಲೆಯಲ್ಲಿ ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಕಾದು ಕುಳಿತಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿದ್ದು, ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ.
ಕಾರ್ಯಕ್ರಮ ಆಯೋಜಕರು ಸರಿಯಾದ ರೀತಿಯಲ್ಲಿ ಆಯೋಜನೆ ಮಾಡದಿರುವುದರಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ ಎನ್ನಲಾಗಿದೆ. ‘ದೇವರ’ ಪ್ರೀ-ರಿಲೀಸ್ ನೋಡಲು ಸುಮಾರು 20 ಸಾವಿರದಷ್ಟು ಅಭಿಮಾನಿಗಳು ಆಗಮಿಸಿದ್ದರು.
ಆ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗಿದೆ. ಸಣ್ಣ ಜಾಗದಲ್ಲಿ ಇಷ್ಟೊಂದು ಜನ ಸೇರಿದ್ದಕ್ಕೆ ಗೊಂದಲ ಉಂಟಾಗಿದೆ. ಅಭಿಮಾನಿಗಳು ಅತಿಥಿಗಳು ಕುಳಿತುಕೊಳ್ಳುವ ಆಸನದತ್ತಲೂ ನುಗ್ಗಿದ್ದಾರೆ .ಅಷ್ಟೇ ಅಲ್ಲದೇ, ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಲೇ ಸಾಗಿದೆ. ಹೀಗಾಗಿ ಸೆಲೆಬ್ರಿಟಿಗಳು ಅಲ್ಲಿಂದ ಹೊರಗೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರದ್ದು ಮಾಡಬೇಕಾಯಿತು.
ದೇವರ: ಪಾರ್ಟ್ 1’ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್, ಜಾನ್ವಿ ಕಪೂರ್, ಸೈಫ್ ಅಲಿ ಖಾನ್ ಸೇರಿದಂತೆ ಹಲವರು ನಟಿಸಿದ್ದಾರೆ.