ಉಜಿರೆ : ಮಹಾವಿಷ್ಣುವಿನ ಶಂಖ, ಚಕ್ರ ಮುದ್ರೆಗಾಳನ್ನು ಸುದರ್ಶನ ಹವನದಲ್ಲಿ ಕಾಯಿಸಿ ತೋಳುಗಳಿಗೆ ಚಿಹ್ನೆ ಧಾರಣೆ ಮಾಡುವುದರಿಂದ ಪಾಪಕರ್ಮಗಳ ನಾಶವಾಗಿ ಮುಂದೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನತೀಥ ಸ್ವಾಮೀಜಿ ಹೇಳಿದ್ದಾರೆ.
ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಗೆ ಮುದ್ರಾಧಾರಣೆ ಮಾಡಿ ಆಶೀರ್ವಾದ ಮಾಡಿದರು. ಬೆಳ್ತಂಗಡಿ ತಾಲೂಕಿನ ಸುಮಾರು 500ಕ್ಕೂ ಹೆಚ್ಚು ಮಿಕ್ಕಿ ಪುರುಷರು, ಮಹಿಳೆಯರು ಹಾಗೂ ಮಕ್ಕಳು ಮುದ್ರಾಧಾರಣೆ ಮಾಡಿಸಿಕೊಂಡರು. ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೇಟ್ನಾಯ ಉಪಸ್ಥಿತರಿದ್ದರು.