ಬೆಂಗಳೂರು: ಜೆಡಿ ಇನ್ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ನಡೆಸಿಕೊಡುವ ಜೆಡಿ ಸ್ಕೂಲ್ ಆಫ್ ಡಿಸೈನ್ ವತಿಯಿಂದ ಬೆಂಗಳೂರು ಆವೃತ್ತಿಯ ಎರಡು ದಿನಗಳ ಕಾಲ ನಗರದ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯಲಿರುವ ವಿದ್ಯಾರ್ಥಿಗಳ ವಿನ್ಯಾಸ ಪ್ರದರ್ಶನ ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ಪ್ರಸಕ್ತ ವರ್ಷ ʼ ಪಾಜ್ʼ ಎಂಬ ಥೀಮ್‌ನೊಂದಿಗೆ ಉದಯೋನ್ಮುಖ ಇಂಟೀರಿಯರ್ ಡಿಸೈನ್ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ. ಈ ಪ್ರದರ್ಶನ ಮೇಳವು ಸುಸ್ಥಿರ ಸಹ- ವಾಸಸ್ಥಾನದ ಜಾಗಗಳು, ಮತ್ತು ಭಾವನಾತ್ಮಕವಾಗಿ ಬುದ್ಧಿವಂತಿಕೆಯಿಂದ ಕೂಡಿದ ಪೀಠೋಪಕರಣಗಳಿಂದ ಹಿಡಿದು ಮರುಕಲ್ಪಿತ ಸಾರ್ವಜನಿಕ ಮೂಲಸೌಕರ್ಯ, ಎಐ ತಂತ್ರಜ್ಞಾನ ಆಧಾರಿತ ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತ ವಿನ್ಯಾಸಗಳನ್ನು ಒಳಗೊಂಡ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಮುಖ್ಯವಾಗಿ ಧ್ರುವಿ ಜೈನ್ ಅವರ ʼLIVENZA’ ಇದೊಂದು ಕುಶಲಕರ್ಮಿ ಕೇಂದ್ರಿತ ಒಳಾಂಗಣವನ್ನು ಮರುಬಳಕೆ ಮಾಡಲಾದ ಸ್ಕ್ರ್ಯಾಪ್ ಮತ್ತು ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು ಮಾಡಲಾದ ವಿನ್ಯಾಸ.
ಪ್ರಾಚೀನ ಪಂಚಗವ್ಯ ವಿಜ್ಞಾನದಿಂದ ಪ್ರೇರಿತವಾದ ಕೈಬಿಟ್ಟ ನಗರ ಸ್ಥಳಗಳನ್ನು ಸ್ವಾಸ್ಥ್ಯ ಅಭಯಾರಣ್ಯಗಳಾಗಿ ಪರಿವರ್ತಿಸಿ ರೂಪಿಸಿದ ವಿದ್ಯಾರ್ಥಿ ಎಂ ಪುರೋಹಿತ್ ಅವರ ʼಗೌಮಯʼ ವಿನ್ಯಾಸ ಮತ್ತು ವಿದ್ಯಾರ್ಥಿ ಸಾಯಿ ದರ್ಶನ್ ಕೆ.ಜೆ ಅವರ ʼಇನ್‌ಸ್ಪಿನಿಟಿʼ ೧೮೦-ಡಿಗ್ರಿಯಿಂದ ಕೂಡಿದ ಮನರಂಜನಾ ಅನಭವವನ್ನು ನೀಡುವ ಭವಿಷ್ಯದ ಐಮ್ಯಾಕ್ಸ್-ಸಂಯೋಜಿತ ತಿರುಗುವ ಗುಮ್ಮಟ. ಮೊನಿಶಾ ಮತ್ತು ರಕ್ಷಾ ಅವರ ʼಪಾಸ್ ವಾಲ್ʼ ವಿನ್ಯಾಸವು ಜನನಿಬಿಡ ನಗರ ಪ್ರದೇಶಗಳನ್ನು ಶಮನಗೊಳಿಸಲು ವಿನ್ಯಾಸಗೊಳಿಸಲಾದ ಸಂವಾದಾತ್ಮಕ ರಚಿತ ಆಸನವಾಗಿದೆ. ” ಗ್ರೀಕ್-ಪ್ರೇರಿತ ಸೌಂದರ್ಯವನ್ನು ಬಯೋಫಿಲಿಕ್ ವಿನ್ಯಾಸದೊಂದಿಗೆ ಸಂಯೋಜಿಸಿ ಪರದೆ-ಮುಕ್ತ, ಪ್ರಕೃತಿ-ಪ್ರೇರಿತ ಕೆಫೆ ಪರಿಸರವನ್ನು ಜೆಫ್ರಿನ್ ಜಿಜಿ ಜಾರ್ಜ್ ಅವರ ʼಬೀಚಿ ಬಿಸ್ಟ್ರೋʼ ವಿನ್ಯಾಸವನ್ನು ಪ್ರಸ್ತುತಪಡಿಸಲಾಗಿತ್ತು.
ಕಾರ್ಯಕ್ರಮದ ಕುರಿತು ವ್ಯವಸ್ಥಾಪಕ ಟ್ರಸ್ಟಿ ನೀಲೇಶ್ ದಲಾಲ್ ಮಾತನಾಡಿ, ಇದೊಂದು ಕೇವಲ ವಸ್ತು ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಲ್ಲ. ಯುವ ವಿನ್ಯಾಸಕಾರರು ನವೀನ ಕಲ್ಪನೆಗಳು, ಸಮಗ್ರತೆ, ನೈಜ ಪ್ರಪಂಚದ ಸವಾಲುಗಳನ್ನು ಎದುರಿಸಲು ಇದೊಂದು ಅದ್ಭುತ ವೇದಿಕೆಯಾಗಲಿದೆ ಎಂದರು.
ಜೆಡಿ ಡಿಸೈನ್ ಸ್ಕೂಲ್ ನ ಪ್ರಾಂಶುಪಾಲರಾದ ಬಿ.ಆರ್ ಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಕಲಿತ ವಿನ್ಯಾಸಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ. ಇದು ವಿದ್ಯಾರ್ಥಿಗಳ ಸಾಮರ್ಥ್ಯ ಜೊತೆಗೆ ಅವರ ಮುಂದಿನ ವೃತ್ತಿ ಜೀವನದ ಅವಕಾಶಗಳಿಗೆ ದಾರಿಮಾಡಿಕೊಡಲಿದೆ ಎಂದು ತಿಳಿಸಿದರು.
ಮೊದಲ ದಿನದ ಇಂದಿನ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು, ಉದ್ಯಮ ನಾಯಕರು, ವಿನ್ಯಾಸ ವೃತ್ತಿಪರರು ಹಾಗೂ ಸಾರ್ವಜನಿಕರು ಪಾಲ್ಗೊಂಡು ವಿದ್ಯಾರ್ಥಿಗಳ ನಾವೀನ್ಯತೆಯುಳ್ಳ ವಿನ್ಯಾಸಗಳನ್ನು ಕಣ್ತುಂಬಿಕೊಂಡರು.