ಶಿವಮೊಗ್ಗ:7ನೇ ತರಗತಿ ವಿದ್ಯಾರ್ಥಿಯ ಮೇಲೆ ಪಾಠ ಕಲಿಸುವ ಶಿಕ್ಷಕರು ಹಿಗ್ಗಾಮುಗ್ಗಾ ಥಳಿಸಿ, ರಕ್ತ ಬರುವ ರೀತಿಯಲ್ಲಿ ಹಲ್ಲೆ ಮಾಡಿರೋ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡು ಹತ್ತಿರದ ಶಡ್ತಿಕೆರೆ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಸುಶ್ರುತ ಹಲ್ಲೆಗೊಳಗಾದ ವಿದ್ಯಾರ್ಥಿ. ಅದೇ ಶಾಲೆಯ ಸಹಶಿಕ್ಷಕ ಮೂರ್ತಿ ಬಿ, ಪ್ರಮೋದ್ ಸಣ್ಣಕ್ಕಿ ಮತ್ತು ಮುಖ್ಯೋಪಾಧ್ಯಾಯ ರಮೇಶ್ ನಾರಾಯಣ್ ಹಲ್ಲೆಗೈದ ಶಿಕ್ಷಕರು.
ಇದೇ ಮಾ.12ರಂದು ಬೆಳಿಗ್ಗೆ11:00 ಗಂಟೆ ಸುಮಾರಿಗೆ ಈ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ. ಶಾಲೆಯಲ್ಲಿ ನೆಡೆದಿರುವಂತಹ ಎಲ್ಲಾ ಘಟನೆಗಳು ಮತ್ತು ತಪ್ಪು ಒಪ್ಪುಗಳನ್ನೆಲ್ಲ ವಿದ್ಯಾರ್ಥಿಯೇ ಕಾರಣವೆಂದು ಆರೋಪಿಸಿ, ಸುಶ್ರುತನ ಮೈ ಮೇಲೆ ಬಾಸುಂಡೆಗಳು ಬರುವ ಹಾಗೆ ಹೊಡೆದು, ಕೈ ಬೆರಳುಗಳನ್ನು ರಕ್ತ ಬರುವ ಹಾಗೆ ಜಜ್ಜಿದ್ದಾರೆ ಎನ್ನಲಾಗುತ್ತಿದೆ.
ಬಳಿಕ ಪೋಷಕರು ವೈದ್ಯರ ಬಳಿ ಹೋದಾಗ ತುಂಬಾ ಪೆಟ್ಟಾಗಿರುವ ಕಾರಣ ಚಿಕಿತ್ಸೆ ಮಾಡಬೇಕೆಂದು ತಿಳಿಸಿದ್ದಾರೆ. ಈ ಅವಾಂತರಕ್ಕೆ ಬಾಲಕನ ನೋವಿನಿಂದ ನರಳುತ್ತಿದ್ದು, ಬಾಲಕನ ತಂದೆ ಕೃಷ್ಣಮೂರ್ತಿ ಮತ್ತು ಅವರ ತಾಯಿ ಶೈಲಜಾ ಶಿಕ್ಷಕರ ವಿರುದ್ಧ ಆಕ್ರೋಶ ಹೊರಹಾಕಿದ್ದು, ನ್ಯಾಯಕ್ಕಾಗಿ ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ : ಇಂದಿರಾ ಕ್ಯಾಟೀನ್‌ಗೆ ಗ್ಯಾಸ್ ಪೂರೈಕೆ ಮಾಡಲು ಗ್ರೀನ್ ಸಿಗ್ನಲ್



















