ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಬಿಸಿಯೂಟ ನೌಕರರು ವಿವಿಧ ಬೇಡಿಕೆಗೆ ಆಗ್ರಹಿಸಿ ಇಂದು ಬೆಳಗ್ಗೆ 11 ಗಂಟೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ.
ಪ್ರತಿಭಟನೆಗೆ ಸಾವಿರಾರು ನೌಕರರು ಭಾಗಿಯಾಗುವ ಸಾಧ್ಯತೆ ಇದ್ದು, ಬೆಂಗಳೂರು ಸೇರಿದಂತೆ ಜಿಲ್ಲಾ ಮಟ್ಟದಲ್ಲಿ ನೌಕರರು ಪ್ರತಿಭಟನೆ ನಡೆಸಲಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಏನು!?
– ಸ್ಟೀಮ್ ನೌಕರರಿಗೆ ದ್ರೋಹ ಬಗೆದ ನಾಲ್ಕು ಕಾರ್ಮಿಕ ಸಂಹಿತೆಗಳು ರದ್ದಾಗಲಿ
– ಸ್ಕೀಮ್ ನೌಕರರಿಗೆ ಶಾಸನಬದ್ಧ ಸವಲತ್ತುಗಳನ್ನು ನೀಡದ ಶ್ರಮಶಕ್ತಿ ನೀತಿ ಬೇಡವೇ ಬೇಡ
– ಅಂಗನವಾಡಿ, ಬಿಸಿಯೂಟ, ಆಶಾ ನೌಕರರನ್ನು ಖಾಯಂ ಮಾಡಿ
– 56 ಲಕ್ಷ ಸ್ಕೀಮ್ ನೌಕರರ ಶೋಷಣೆ ನಿಲ್ಲಿಸಿ
– ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತರಿಗೆ ಪ್ರತ್ಯೇಕ ವೇತನ ಮಂಡಳಿ ರಚಿಸಿ
– ಆಹಾರ, ಆರೋಗ್ಯ, ಶಿಕ್ಷಣ ಹಕ್ಕಾಗಲಿ
– ಶ್ರೀಮಂತರ ಪಿತ್ರಾರ್ಜಿತ ಆಸ್ತಿಯ ಮೇಲೆ ತೆರಿಗೆ ಹಾಕಿ
– ಯೋಜನೆಗಳನ್ನು ಖಾಯಂ ಮಾಡಿ
– ICDS, MDM, ASHA ಯೋಜನೆಗಳಿಗೆ ಬಜೆಟ್ ಹೆಚ್ಚಳ ಮಾಡಿ
– ಅಂಗನವಾಡಿ, ಬಿಸಿಯೂಟ, ಆಶಾ ಮಹಿಳೆಯರಿಗೆ ಹೆರಿಗೆ ರಜೆ, ಮುಟ್ಟಿನ ರಜೆ, ಸಾರ್ವತ್ರಿಕ ರಜೆಗಳನ್ನು ಖಾತ್ರಿ ಪಡಿಸಿ
ಇದನ್ನೂ ಓದಿ: ಬೆಂಗಳೂರು | ಮನೆಯ ಬಳಿ ಆಟವಾಡುತ್ತಿದ್ದ ಮಗುವಿನ ಮೇಲೆ ಹರಿದ ಕಾರು ; ಪ್ರಾಣಪಾಯದಿಂದ ಪಾರು



















