ವಿಜಯನಗರ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಹಿನ್ನೆಲೆ ಲೋಡ್ ಗಟ್ಟಲೇ ಕೆಂಪು ಸುಂದರಿ ಟೊಮೆಟೊ ಕುರಿ, ಮೇಕೆಗಳ ಪಾಲಾಗುತ್ತಿದೆ. ಪ್ರತಿನಿತ್ಯ ಹೊಸಪೇಟೆಯ ಎಪಿಎಂಸಿಗೆ ಮೂರ್ನಾಲ್ಕು ಟ್ರಾಕ್ಟರ್ ಟೊಮೆಟೊ ಲೋಡ್ ಹೋಗುತ್ತಿದೆ. ಆದರೆ ನಿತ್ಯ ಬರುವ ಟೊಮೆಟೊವನ್ನು ಯಾರೂ ಕೂಡ ಖರೀದಿ ಮಾಡ್ತಿಲ್ಲ. ಹಾಗಾಗಿ, ರೈತರು ತರುವ ಮಾಲು ಎಪಿಎಂಸಿಯಿಂದ ನೇರವಾಗಿ ಕುರಿಹಟ್ಟಿಗಳಿಗೆ ಹೋಗ್ತಿದೆ.
ಗ್ಯಾಸ್ ಕೊರತೆಯ ಹಿನ್ನಲೆ ಹೊಟೇಲ್ ಮಾಲೀಕರು ಸಹ ಖರೀದಿ ಮಾಡೋದು ಕಡಿಮೆ ಮಾಡಿದ್ದಾರೆ. ಟೊಮೆಟೊ ಚಿಪ್ಸ್‌ಗೆ ಖರೀದಿಯಾಗುತ್ತಿದ್ದ ಟೊಮೆಟೊ ಕೂಡ ಖರೀದಿಯಾಗ್ತಿಲ್ಲ. ಹೊಟೇಲ್‌ಗಳಿಗೆ ಖರೀದಿಯಾಗುತ್ತಿದ್ದ ಟೊಮೆಟೊ ಸಂಖ್ಯೆ ಕೂಡ ಕುಸಿತ ಇದರಿಂದ ಕಂಗಾಲಾದ ರೈತರು ತಾವು ಬೆಳೆದ ತರಕಾರಿಗಳನ್ನು ಕುಹಟ್ಟಿಗಳಿಗೆ ನೀಡುತ್ತಿದ್ದಾರೆ
ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹಡಗಲಿ, ಕೊಟ್ಟೂರು, ಕೂಡ್ಲಿಗಿ, ಹಗರಿಬೊಮ್ಮನ ಹಳ್ಳಿ ಸೇರಿದಂತೆ 5 ತಾಲೂಕುಗಳಿಂದ ಹೊಸಪೇಟೆ APMCಗೆ ಬರುವ ಟೊಮೆಟೊವನ್ನು ಯಾರೂ ಖರೀದಿ ಮಾಡದ ಕಾರಣ ರೈತರು, ನೇರವಾಗಿ ಕುರಿಹಟ್ಟಿಗಳ ಕೊಡುತ್ತಿದ್ದಾರೆ.
ಹೊಸಪೇಟೆಯ APMC ಯಿಂದ ಜಂಬುನಾಥನ ಹಳ್ಳಿ, ರಾಯರ ಕೆರೆ ಪ್ರದೇಶದಲ್ಲಿನ ಕುರಿ ಸಾಕಿರುವ ರೈತರು ಉಳಿದ ಟೊಮೆಟೊ, ಉಳ್ಳಾಗಡ್ಡಿ, ಬದನೆಕಾಯಿ ಟ್ರಾಕ್ಟರ್ ಮೂಲಕ ಲೋಡ್ ಮಾಡಿಕೊಂಡು ಬಂದು ಕುರಿಹಟ್ಟಿಗಳಿಗೆ ಕೊಂಡೋಯ್ಯುದು ಕುರಿಗಳಿಗೆ ಹಾಕಲಾಗುತ್ತಿದೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಮದುವೆಗೆ ಹೆಣ್ಣು ಸಿಗ್ತಿಲ್ಲ ಅಂತ ಕುರಿಗಾಹಿ ಆತ್ಮಹತ್ಯೆ.!


















