ಕೆಂಪು ಸುಂದರಿ ಟೊಮ್ಯಾಟೊಗೆ ಇದೀಗ ಮತ್ತೆ ಡಿಮ್ಯಾಂಡ್ ಬಂದಿದೆ. 100ರ ಗಡಿಯತ್ತ ಟೊಮ್ಯಾಟೋ ಬೆಲೆ ಸಾಗುತ್ತಿದೆ.
ಕಳೆದ ಒಂದು ವಾರದಿಂದ ಟೊಮ್ಯಾಟೊ ದರ 700 ರಿಂದ 800 ಗಡಿ ದಾಟಿದ್ದು, ಕಳೆದ ವರ್ಷದಂತೆ ಈ ವರ್ಷವೂ ಸಹ ಟೊಮ್ಯಾಟೊ ಸಾವಿರ ರೂಪಾಯಿ ಗಡಿ ದಾಟುವ ಸೂಚನೆ ಕೊಟ್ಟಿದೆ. ಇಷ್ಟುದಿನ 400 ರಿಂದ 500 ರೂ.ವರೆಗೂ ಮಾರಾಟವಾಗುತ್ತಿದ್ದ ಟೊಮ್ಯಾಟೊ, ಇವತ್ತು 15 ಕೆಜಿ ಟೊಮ್ಯಾಟೊ ಬಾಕ್ಸ್ 600 ರಿಂದ 700 ರೂ.ವರೆಗೆ ಹರಾಜಾಗಿದೆ.
ಕಳೆದ ಒಂದು ವಾರದಿಂದ ಟೊಮ್ಯಾಟೊ ಬೆಲೆ ಗಗನಕ್ಕೇರುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದ್ದರೇ, ರೈತರ ಮೊಗದಲ್ಲಿ ಮಂದಾಹಸ ಮೂಡಿಸಿದೆ. ಉತ್ತರ ಭಾರತದಲ್ಲಿ ಮಳೆರಾಯನ ಅಬ್ಬರದಿಂದಾಗಿ ಟೊಮ್ಯಾಟೊಗೆ ಪುಲ್ ಡಿಮ್ಯಾಂಡ್ ಬಂದಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಇದರಿಂದ ಸ್ಥಳೀಯವಾಗಿ ರೈತರು ಬೆಳೆದ ಬೆಳೆಗಳು ಮಳೆಯ ಅಬ್ಬರಕ್ಕೆ ಕೊಚ್ಚಿಹೋಗಿವೆ.
ಇದರ ಪರಿಣಾಮ ಕೋಲಾರದ ಟೊಮ್ಯಾಟೊಗೆ ಭಾರಿ ಬೇಡಿಕೆ ಬಂದಿದೆ. ಈ ಕಾರಣದಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ.