ನವದೆಹಲಿ : ದೆಹಲಿಯ ಹಲವು ಕೆಳ ನ್ಯಾಯಾಲಯಗಳು ಹಾಗೂ ಸಿಆರ್‌ಪಿಎಫ್ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇತ್ತೀಚೆಗಷ್ಟೇ ದೆಹಲಿಯಲ್ಲಿ ಸ್ಫೋಟ ಸಂಭವಿಸಿದ್ದ ಕಾರಣ, ಆತಂಕ ಮತ್ತಷ್ಟು ಹೆಚ್ಚಿದೆ. ಕೂಡಲೇ ವಕೀಲರು ಹಾಗೂ ಸಾರ್ವಜನಿಕರನ್ನು ನ್ಯಾಯಾಲಯದಿಂದ ಹೊರಗೆ ಕಳುಹಿಸಿ ಪೊಲೀಸರು ತಪಾಸಣೆ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಸಾಕೇತ್ ನ್ಯಾಯಾಲಯ, ಪಟಿಯಾಲ ಹೌಸ್ ನ್ಯಾಯಾಲಯ, ತೀಸ್ ಹಜಾರಿ ನ್ಯಾಯಾಲಯ ಮತ್ತು ಇತರ ಹಲವಾರು ಜಿಲ್ಲಾ ನ್ಯಾಯಾಲಯಗಳಲ್ಲಿ ಬಾಂಬ್ ಬೆದರಿಕೆಗಳು ಬಂದಿವೆ ಎಂದು ಹೇಳಲಾಗುತ್ತದೆ.
ಬಾಂಬ್ ನಿಷ್ಕ್ರಿಯ ದಳದ ವ್ಯಾನ್‌ಗಳು, ಶ್ವಾನ ದಳಗಳು ಮತ್ತು ವಿಧ್ವಂಸಕ ವಿರೋಧಿ ಘಟಕಗಳು ಸ್ಥಳಗಳಿಗೆ ತಲುಪುತ್ತಿದ್ದಂತೆ ಪೊಲೀಸರು ಜನರನ್ನು ಸ್ಥಳಾಂತರಿಸುವ ಕಾರ್ಯ ಆರಂಭಿಸಿದ್ದು, ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿ ಭದ್ರತಾ ವ್ಯವಸ್ಥೆಗಳನ್ನು ತೀವ್ರಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸಿಬ್ಬಂದಿಯನ್ನು ಹೆಚ್ಚಿನ ಎಚ್ಚರಿಕೆಯಲ್ಲಿ ಇರಿಸಲಾಗಿದೆ.
ನಗರದ ಎರಡು ಸಿಆರ್‌ಪಿಎಫ್ ಶಾಲೆಗಳಿಗೂ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ದ್ವಾರಕಾದ ಸಿಆರ್‌ಪಿಎಫ್ ಶಾಲೆ ಮತ್ತು ಪ್ರಶಾಂತ್ ವಿಹಾರ್‌ನಲ್ಲಿರುವ ಮತ್ತೊಂದು ಸಿಆರ್‌ಪಿಎಫ್ ಶಾಲೆಗೆ ಎಚ್ಚರಿಕೆ ನೀಡಲಾಗಿದ್ದು, ಪೊಲೀಸ್ ತಂಡಗಳು ತ್ವರಿತ ಕ್ರಮ ಕೈಗೊಂಡು ಕ್ಯಾಂಪಸ್‌ನಲ್ಲಿ ಪರಿಶೀಲನೆ ನಡೆಸುತತ್ತಿವೆ.
ನ್ಯಾಯಾಲಯಗಳು ಮತ್ತು ಶಾಲೆಗಳ ಹೊರಗೆ ಹೆಚ್ಚುವರಿ ಪೊಲೀಸ್ ನಿಯೋಜನೆಯನ್ನು ಮಾಡಲಾಗಿದೆ. ಕರೆಗಳು ಒಂದೇ ಮೂಲದಿಂದ ಬಂದಿವೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ |
ಕೆಂಪುಕೋಟೆ ಬಳಿ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ತನಿಖೆಯನ್ನು ಮುಂದುವರೆಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಸ್ಫೋಟದಲ್ಲಿ ಭಾಗಿಯಾಗಿರುವ ಭಯೋತ್ಪಾದಕನ ಮತ್ತೊಬ್ಬ ಪ್ರಮುಖ ಸಹಚರನನ್ನು ಬಂಧಿಸಿದೆ. ನವೆಂಬರ್ 10ರಂದು ದೆಹಲಿಯಲ್ಲಿ ಕಾರು ಸ್ಫೋಟ ನಡೆದಿತ್ತು. ಘಟನೆಯಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದರು. ಬಾಂಬ್ ಸ್ಫೋಟದ ಹಿಂದಿನ ಪಿತೂರಿಯನ್ನು ಬಯಲು ಮಾಡಲು ಎನ್ಐಎ ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದೆ. ಭಯೋತ್ಪಾದನಾ ನಿಗ್ರಹ ಸಂಸ್ಥೆಯ ಹಲವಾರು ತಂಡಗಳು ಹಲವಾರು ಸುಳಿವುಗಳನ್ನು ಅನುಸರಿಸುತ್ತಿವೆ. ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಗುರುತಿಸಲು ದೇಶಾದ್ಯಂತ ಶೋಧ ನಡೆಸುತ್ತಿವೆ.
ಇದನ್ನೂ ಓದಿ : ಹಿಂದೂ ಭಾವನೆಗೆ ಧಕ್ಕೆ | ಡೈರೆಕ್ಟರ್ ರಾಜಮೌಳಿ ವಿರದ್ಧ ದೂರು ದಾಖಲು!


















