ಮೈಸೂರು : ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೇರಳೆ ಗೇಟ್ ಬಳಿ, ರಸ್ತೆ ದಾಟುತ್ತಿದ್ದ ಜಿಂಕೆಗೆ ಅಪರಿಚಿತ ವಾಹನ ಡಿಕ್ಕಿ ಹೆಡೆದ ಪರಿಣಾಮ ಜಿಂಕೆ ಸ್ಥಳದಲ್ಲೇ ಸಾವು ಹೊಂದಿದೆ.
ವಾಹನ ಚಾಲಕ ಅಪಘಾತದ ನಂತರ ಸ್ಥಳದಿಂದ ಪರಾರಿಯಾಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚೆಗೆ ನೇರಳೆ ಗೇಟ್ ಪ್ರದೇಶದಲ್ಲಿ ಜಿಂಕೆಗಳಿಗೆ ಅಪಘಾತ ಸಂಭವಿಸುವುದರ ಸಂಖ್ಯೆ ಹೆಚ್ಚಾಗಿದ್ದು, ಸ್ಥಳೀಯರು ಅಲ್ಲಿ ನಾಮಫಲಕ ಮತ್ತು ಸ್ಪೀಡ್ ಬ್ರೇಕರ್ ಹಾಕುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರಲ್ಲಿ ಕರಡಿ ಪ್ರತ್ಯಕ್ಷ.. ಸ್ಥಳೀಯರಲ್ಲಿ ಆತಂಕ



















