ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದುಕೊಂಡಿದ್ದ 14 ನಿವೇಶನಗಳನ್ನು ಮರಳಿ ನೀಡಿದ್ದಾರೆ. ಸೇಲ್ ಡೀಡ್ ಇಂದು ರದ್ದಾಗಲಿದೆ ಎಂದು ಮುಡಾ ಕಚೇರಿಯ ಉಪ ನೋಂದಣಾಧಿಕಾರಿ ವಿ. ರುಕ್ಕಿಣಿ ಹೇಳಿದ್ದಾರೆ.
ಈಗಾಗಲೇ ಪಾರ್ವತಿ ಅವರು ತಮಗೆ ಮುಡಾದಿಂದ ನೀಡಿರುವ ನಿವೇಶನಗಳನ್ನು ಹಿಂಪಡೆಯುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಸನ್ನಕುಮಾರ್ ನೋಂದಣಿ ರದ್ದುಪಡಿಸಲು ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸಿ ಫೋಟೊ ಕೂಡ ನೀಡಿದ್ದಾರೆ. ಅಲ್ಲದೇ, ಅವರ ನಿವಾಸಕ್ಕೆ ತೆರಳಿ ಪೈವೇಟ್ ಆಟೆಂಡೆನ್ಸ್ ಮುಖಾಂತರ ಪಾರ್ವತಿ ಅವರ ಫೋಟೊ ಹಾಗೂ ಹೆಬ್ಬೆರಳಿನ ಗುರುತು ತೆಗೆದುಕೊಂಡು ಬಂದಿದ್ದೇವೆ. ಕಚೇರಿಗೆ ಆ ದಾಖಲೆಗಳನ್ನು ಒಪ್ಪಿಸಲಾಗುವುದು. ದಾಖಲೆಗೆ ಸಂಬಂಧಿಸಿದ ನಂಬರ್ ಬರುತ್ತದೆ. ಅದರ ಆಧಾರದಲ್ಲಿ 14 ನಿವೇಶನಗಳ ಸೇಲ್ ಡೀಡ್ ರದ್ದುಪಡಿಸಲಾಗುವುದು ಎಂದಿದ್ದಾರೆ.
ಕೆಸರೆ ಗ್ರಾಮದ ಜಮೀನಿನ ಮಹಜರು ನಡೆಸಿರುವ ಲೋಕಾಯುಕ್ತ ತನಿಖಾ ತಂಡ, ಈ ಜಾಗಕ್ಕೆ ಬದಲಾಗಿ ಮುಡಾದಿಂದ ವಿಜಯನಗರದಲ್ಲಿ ನೀಡಲಾಗಿರುವ 14 ನಿವೇಶನಗಳ ಮಹಜರು ನಡೆಸಲಾಗುತ್ತಿದೆ.