ಒಟ್ಟಾವ : ಕೆನಡಾದ ಬ್ರಿಟಿಷ್ ಕೊಲಂಬಿಯಾದ ಶಾಲೆಯಲ್ಲಿ ನಡೆದ ಗುಂಡಿನ ಭೀಕರ ದಾಳಿಯಲ್ಲಿ ಗನ್ ಮ್ಯಾನ್ ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. 20ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಧಜು ವರದಿಯಾಗಿದೆ.
ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು (RCMP) ಹೇಳುವಂತೆ, ಶಂಕಿತ ಗನ್ಮ್ಯಾನ್ ಹಾಗೂ ಇತರ 6 ಜನರು ಶಾಲಾ ಆವರಣದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದರೆ, ಇನ್ನುಳಿದ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಟಂಬರ್ ರಿಡ್ಜ್ ಮಾಧ್ಯಮಿಕ ಶಾಲೆಯಲ್ಲಿ ಸ್ಥಳೀಯ ಕಾಲಮಾನ ಮಧ್ಯಾಹ್ನ 1.20ರ ವೇಳೆಗೆ ಘಟನೆ ನಡೆದಿದೆ. ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು ಅಲರ್ಟ್ ಘೋಷಣೆ ಮಾಡಿದ್ದಾರೆ. ಸುಮಾರು 2,400 ಜನಸಂಖ್ಯೆ ಹೊಂದಿರುವ ಟಂಬರ್ ರಿಡ್ಜ್ ಪಟ್ಟಣದ ನಿವಾಸಿಗಳು ಮನೆಯಿಂದಾಚೆ ಬಾರದಂತೆ ಎಚ್ಚರಿಸಿದ್ದಾರೆ. ಘಟನಾ ಸ್ಥಳ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಕೂಡ ಹೆಚ್ಚಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನೂ ತನಿಖೆ ಮುಂದುವರಿಸಿರುವ ಪೊಲೀಸರು ಕೃತ್ಯ ಎಸಗಿದ ಮತ್ತೊಬ್ಬ ಗನ್ ಮ್ಯಾನ್ ಸಾವನ್ನಪ್ಪಿದ್ದಾನೆಯೇ ಎಂದು ಶೋಧಿಸಲಾಗುತ್ತಿದೆ. ಜೊತೆಗೆ ಮೃತರ ಅಧೀಕೃತ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುತ್ತಿದ್ದಾರೆ. ಘಟನೆಗೆ ಕೆನಡಾ ಪ್ರಧಾನಿ ತೀವ್ರ ಆಕ್ಷೇಪ ಹೊರಹಾಕಿದ್ದಾರೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ ಬಿಕ್ಕಟ್ಟು | ಹಿಂದೆ ಸರಿದಿದ್ದು ಐಸಿಸಿ, ಪಾಕಿಸ್ತಾನವಲ್ಲ – ಮಾಜಿ PCB ಅಧ್ಯಕ್ಷ ನಜಮ್ ಸೇಥಿ ಅಚ್ಚರಿಯ ಹೇಳಿಕೆ!



















