ಖ್ಯಾತ ನಿರ್ದೇಶಕ ರವಿ ಶ್ರೀವತ್ಸ ನಿರ್ದೇಶನದ ಡೆಡ್ಲಿಸೋಮ 2 ಸಿನಿಮಾದ ಶೂಟಿಂಗ್ ಮುಗಿದಿದೆ.
ಈ ಸಿನಿಮಾದಲ್ಲಿ ನವ ನಟ ದೀಕ್ಷಿತ್ ನಾಯಕನಾಗಿ ನಟಿಸಿದ್ದು, ಕನ್ನಡ ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಡೆಡ್ಲಿಸೋಮ 2005ರಲ್ಲಿ ತೆರೆಕಂಡ ಡೆಡ್ಲಿ ಸೋಮ ಸಿನಿಮಾ ಸೂಪರ್ ಹಿಟ್ ಆದ ಬಳಿಕ ಮತ್ತೆ ಅದೇ ಟೈಟಲ್ ಮೊರೆಹೋಗಿದ್ದರು.
ಶ್ರೀವತ್ಸ ಅವರು ಇದೀಗ ಡೆಡ್ಲಿಸೋಮ 2 ಸಿನಿಮಾವನ್ನು ನೂರಕ್ಕೂ ಹೆಚ್ಚು ದಿನ ಶೂಟಿಂಗ್ ಮಾಡಿದ್ದರು.. ಇದಕ್ಕೂ ಈ ತಂಡ ಮುತ್ತಪ್ಪ ರೈ ಬಯೋಪಿಕ್ ಮಾಡಲು ಕೈ ಹಾಕಿತ್ತು. ಕಾನೂನು ತೊಡಕಾದ ಹಿನ್ನೆಲೆ ಆ ಚಿತ್ರ ಕೈ ಬಿಟ್ಟು ಡೆಡ್ಲಿ ಸೋಮ 2 ಚಿತ್ರವನ್ನು ಶುರು ಮಾಡಿದ್ದರು.. ಈಗ ಚಿತ್ರದ ಶೂಟಿಂಗ್ ಮುಗಿದಿದೆ.